Friday, June 5, 2026
Homeಕರಾವಳಿಮಂಗಳೂರು; ತೀವ್ರ ಅನಾರೋಗ್ಯದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಯಂತ್ ಕುಮಾರ್ ಹೆಚ್.ಆರ್ ನಿಧನ

ಮಂಗಳೂರು; ತೀವ್ರ ಅನಾರೋಗ್ಯದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಯಂತ್ ಕುಮಾರ್ ಹೆಚ್.ಆರ್ ನಿಧನ

- Advertisement -
- Advertisement -

ಮಂಗಳೂರು; ಕಂಕನಾಡಿ ನಗರ ಪೊಲೀಸ್ ಠಾಣೆ ಗರೋಡಿ ಮಂಗಳೂರು ಇಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಜಯಂತ್ ಕುಮಾರ್ ಹೆಚ್.ಆರ್ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸಂಜೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಇವರು ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ.

03-10-1997 ರಂದು ಕರ್ನಾಟಕ ಪೊಲೀಸ್ ಇಲಾಖೆಗೆ ನೇಮಕಾತಿ ಹೊಂದಿ ಸುಮಾರು 25 ವರ್ಷಗಳಲ್ಲಿ ದಕ್ಷಿಣಕನ್ನಡದ  ಸುಳ್ಯ ಪೊಲೀಸ್ ಠಾಣೆ, ಮಂಗಳೂರು ನಗರದ ಉತ್ತರ & ದಕ್ಷಿಣ ಪೊಲೀಸ್ ಠಾಣೆ, ಉರ್ವ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ  ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸುಮಾರು 4 ವರ್ಷ ಗಳಿಂದ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಇವರ ಅಗಲಿಕೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!