Monday, April 29, 2024
Homeಕರಾವಳಿಪತ್ರಕರ್ತನಿಗೆ ಒಲಿದ ಬೆಳ್ತಂಗಡಿ ಜೆಡಿಎಸ್ ಟಿಕೆಟ್

ಪತ್ರಕರ್ತನಿಗೆ ಒಲಿದ ಬೆಳ್ತಂಗಡಿ ಜೆಡಿಎಸ್ ಟಿಕೆಟ್

spot_img
- Advertisement -
- Advertisement -

ಬೆಳ್ತಂಗಡಿ; 2023 ರ ಕರ್ನಾಟಕ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಗೆ  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಪತ್ರಕರ್ತ ಅಶ್ರಫ್ ಆಲಿಕುಂಞಿ ಅವರಿಗೆ ಅವಕಾಶ ಲಭಿಸಿದೆ. ಇಂದು ಅವರಿಗೆ  ಪಕ್ಷದ ಹಿರಿಯರ ಸಮ್ಮುಖ ಅವರಿಗೆ ಅಧಿಕೃರ ‘ಬಿ ಫಾರ್ಮ್’ ಹಸ್ತಾಂತರಿಸಲಾಯಿತು.

ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು 1998 ರಿಂದ ಜೈ ಕನ್ನಡಮ್ಮ ವಾರಪತ್ರಿಕೆ, ಕರಾವಳಿ ಅಲೆ ದಿನ ಪತ್ರಿಕೆ, ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವರದಿಗಾರರಾಗಿ,  ಪ್ರಸ್ತುತ ಜಯಕಿರಣ ಕನ್ನಡ ಬೆಳಗ್ಗಿನ ದೈನಿಕ ಪತ್ರಿಕೆಯಲ್ಲಿ ಹವ್ಯಾಸಿಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.‌

ಮುಂಡಾಜೆ ಗ್ರಾಮದ ದಿ. ಆಲಿಕುಂಞಿ ಮತ್ತು ಕೆ ನೆಫೀಸಾ ದಂಪತಿ ಪುತ್ರರಾಗಿ ಜನಿಸಿದ ಅವರು ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಪ್ರೌಢ ಶಾಲೆವರೆಗಿನ ಶಿಕ್ಷಣವನ್ನು ಮುಂಡಾಜೆಯಲ್ಲಿ, ಬಳಿಕ ವೃತ್ತಿಗೆ ಸಂಬಂಧಿಸಿದ ಅಗತ್ಯ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಚಪ್ಪಲ್ ಅಂಗಡಿ ಮತ್ತು ಸೈಕಲ್ ರಿಪೇರಿ ವ್ಯವಹಾರ ನಡೆಸುತ್ತಿದ್ದವರು,.ಕೋವಿಡ್ ಬಳಿಕ ಇಲೆಕ್ಟ್ರೀಷಿಯನ್ ಆಗಿಯೂ ಕೆಲಸ ಮಾಡಿ ಅಸಂಘಟಿಕ ಕಾರ್ಮಿಕ ವಲಯದಲ್ಲಿ ಗುರುತಿಕೊಂಡಿದ್ದಾರೆ.

ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ, ಅಭಿವೃದ್ಧಿಪರ ಮತ್ತು ಮಾನವೀಯ ಪತ್ರಿಕೋಧ್ಯಮದ ಮೂಲಕ ಅಪಾರ ಜನಮನ್ನಣೆ ಗಳಿಸಿಕೊಂಡಿದ್ದಾರೆ.ಅತ್ಯುತ್ತಮ‌ ಸಂಘಟಕರೂ ಆಗಿರುವ ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,  ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆ  ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಮುದಾಯ ಸಂಘಟನೆಗಳಾದ ಎಸ್‌ವೈಎಸ್ ಇದರ ಮುಂಡಾಜೆ ಸರ್ಕಲ್, ಬೆಳ್ತಂಗಡಿ ಝೋನ್ ಮತ್ತು ಈಸ್ಟ್ ಜಿಲ್ಲೆ, ಮಾನವ ಸ್ಪಂದನ ಕೋವಿಡ್ ವಾರಿಯರ್ಸ್‌ ತಂಡ, ಕರ್ನಾಟಕ ರಾಜ್ಯ ಮುಸ್ಲಿಂ ಲೇಖಕರು ಮತ್ತು ಪತ್ರಕರ್ತರ ಸಂಘ ಬೆಂಗಳೂರು ಮುಂತಾದ ಸಂಘಟನೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ‌. ಅತ್ಯುತ್ತಮ ಬರಹಗಾರರು, ಭಾಷಣಗಾರರು, ಸಂಪನ್ಮೂಲ ವ್ಯಕ್ತಿ, ಕಾರ್ಯಕ್ರಮ ಉದ್ಘೋಷಕರು ಹಾಗೂ ಟಿ.ವಿ ನಿರೂಪಕರೂ ಆಗಿದ್ದಾರೆ.

ಇನ್ನು ಟಿಕೆಟ್ ಲಭಿಸಿರೋದಾಗಿ ಖುಷಿ ವ್ಯಕ್ತಪಡಿಸಿರುವ ಅವರು ಸಾಮಾಜಿಕ‌ ಬದುಕಿನುದ್ದಕ್ಕೂ ಜಾತ್ಯಾತೀತ ತತ್ವ ಸಿದ್ದಾಂತದ ಮೇಲೆ ಅಪಾರ ನಂಬಿಕೆಯಿಂದ ನಡೆದುಕೊಂಡಿದ್ದೇನೆ. ಓರ್ವ ಸಾಮಾನ್ಯ ಪತ್ರಕರ್ತನಾಗಿ ತಾಲೂಕಿನ ಮೂಲೆ ಮೂಲೆಗೆ ಓಡಾಡಿದ್ದೇನೆ. ಎಲ್ಲ ಜಾತಿ-ಜನಾಂಗವನ್ನು ಸಮಾನವಾಗಿ ಕಂಡು ನಡೆದುಕೊಂಡಿದ್ದೇನೆ. ಆ ಮೂಲಕ ಎಲ್ಲರ ಒಲವು ಅಭಿಮಾನ‌ ಗಳಿಸಿದ್ದೇನೆ. ತಾಲೂಕಿನ ನೈಜ‌ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣವಿದೆ.ಪಕ್ಷ ರಾಜಕೀಯದಲ್ಲಿ ಇದುವರೆಗೆ ಇಲ್ಲದಿದ್ದ ಓರ್ವ ಸಾಮಾನ್ಯ ಪತ್ರಕರ್ತನಾದ ನನ್ನ ಪ್ರಾಮಾಣಿಕತೆಯನ್ನು ಗುರುತಿಸಿ‌ ಸ್ವತಃ ಹೆಚ್. ಡಿ ಕುಮಾರಸ್ವಾಮಿಯವರೇ ನನಗೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ತಾಲೂಕಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಅಗಲಿದವರ ಆದರ್ಶ, ಈಗ ಇರುವ ಎಲ್ಲಾ ಹಿರಿಯ ಕಿರಿಯ‌ ನಾಯಕರ ಮಾರ್ಗದರ್ಶನದಲ್ಲಿ ಮುಂದುವರಿಯಲಿದ್ದೇನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!