Sunday, May 19, 2024
HomeUncategorizedಮಾಣಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿ;ಬಾಲಕೃಷ್ಣ ಆಳ್ವ, ಕೊಡಾಜೆ

ಮಾಣಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿ;ಬಾಲಕೃಷ್ಣ ಆಳ್ವ, ಕೊಡಾಜೆ

spot_img
- Advertisement -
- Advertisement -

ಮಾಣಿ:ಕಳೆದ ಒಂದೆರಡು ತಿಂಗಳ ಹಿಂದೆ ಗುದ್ದಲಿಪೂಜೆ ಮಾಡಲಾಗಿದ್ದ 62 ಲಕ್ಷ ರೂಪಾಯಿ ವೆಚ್ಚದ *ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ* ಮಾಣಿಯಲ್ಲಿ ಪ್ರಗತಿಯಲ್ಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆಯವರು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಪ್ರಮುಖವಾಗಿ 1 ಲಕ್ಷ ಲೀಟರ್ ಸಾಮರ್ಥ್ಯದ ಒಂದು ಮತ್ತು 50 ಸಾವಿರ ಲೀಟರ್ ಸಾಮರ್ಥ್ಯದ ಮೂರು ಟ್ಯಾಂಕ್ ಗಳು ಮತ್ತು 5 ಸಾವಿರ ಮೀಟರ್ ನಷ್ಟು ಪೈಪು ಅಳವಡಿಸುವ ಕಾರ್ಯ ನಡೆಯಲಿದೆ.



ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 35 ಶೇಕಡಾ, ಫಲಾನುಭವಿಗಳಿಂದ 15 ಶೇಕಡಾ ಹಾಗೂ ಪಂಚಾಯತ್ ನಿಧಿಯಿಂದ 15 ಶೇಕಡಾ ವೆಚ್ಚವನ್ನು ಭರಿಸಲಾಗುವುದು.

ಯೋಜನೆಯ ಗುತ್ತಿಗೆಯನ್ನು ಮೂಡುಬಿದಿರೆಯ ಅರುಣ್ ಕುಮಾರ್ ರವರು ವಹಿಸಿಕೊಂಡಿದ್ದು, ಅತೀ ಶೀಘ್ರವಾಗಿ ಕಾಮಗಾರಿಯನ್ನು ಪೂರೈಸಲಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದರು.



ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!