Monday, June 8, 2026
HomeWorldಅಮೆರಿಕ ಸೇನಾ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಆಫ್ಘನ್ ಮಹಿಳೆ !

ಅಮೆರಿಕ ಸೇನಾ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಆಫ್ಘನ್ ಮಹಿಳೆ !

- Advertisement -
- Advertisement -

ಕಾಬೂಲ್: ಕಾಬೂಲ್ ಏರ್ಪೋರ್ಟ್ ನಿಂದ ಜನರನ್ನು ಅಮೆರಿಕ ಸೇನಾ ವಿಮಾನದಲ್ಲಿ ಏರ್ ಲಿಫ್ಟ್ ಮಾಡುವ ಸಂಧರ್ಭದಲ್ಲಿಆಫ್ಘನ್ ಮಹಿಳೆಯೊಬ್ಬರಿಗೆ ವಿಮಾನದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.

ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್‌ ನಲ್ಲಿ ಶನಿವಾರ ಅಮೆರಿಕ ಮಿಲಿಟರಿ ವಿಮಾನದ ಮೂಲಕ ಸ್ಥಳಾಂತರಿಸುವ ವೇಳೆ ಆಫ್ಘಾನಿಸ್ಥಾನದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಮೆರಿಕ ಏರ್ ಫೋರ್ಸ್ ಮಾಹಿತಿ ನೀಡಿದೆ.ವಿಮಾನದಲ್ಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ.

ಆಫ್ಘಾನಿಸ್ತಾನದ ತಾಲಿಬಾನಿನ ವಶದಲ್ಲಿರುವ ಪ್ರದೇಶದಿಂದ ಸಿ-17 ವಿಮಾನದಲ್ಲಿ ಸ್ಥಳಾಂತರಿಸಲಾದ ಗರ್ಭಿಣಿಗೆ ಹೆರಿಗೆಯಾಗಿದ್ದು, ವಿಮಾನ ಜರ್ಮನಿಯ ವಾಯುನೆಲೆಗೆ ತೆರಳುತ್ತಿತ್ತು. ವಿಮಾನ ಎತ್ತರದಲ್ಲಿ ಹಾರುವಾಗ ಕಡಿಮೆ ವಾಯು ಒತ್ತಡವಾಗಿ ಗರ್ಭಿಣಿಗೆ ಹೆರಿಗೆ ನೋವು ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನದ ಕಮಾಂಡರ್ ವಿಮಾನದಲ್ಲಿ ವಾಯುಒತ್ತಡವನ್ನು ಹೆಚ್ಚಿಸಲು ಮತ್ತು ಮಹಿಳೆಯ ಉಳಿಸಲು ವಿಮಾನವನ್ನು ಕೆಳಮಟ್ಟದಲ್ಲಿ ಹಾರಿಸಿ ನೆರವಾಗಿದ್ದಾರೆ. ತಾಯಿ ಮತ್ತು ಮಗುವನ್ನು ರಾಮ್‌ಸ್ಟೈನ್ ಏರ್ ಬೇಸ್‌ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಫ್ಘಾನಿಸ್ತಾನದಿಂದ ವಲಸೆ ಬಂದವರಿಗೆ ರಾಮ್‌ಸ್ಟೈನ್ ಏರ್ ಬೇಸ್‌ ಪ್ರಮುಖ ಸಾರಿಗೆ ಕೇಂದ್ರವಾಗಿ ಮಾರ್ಪಟ್ಟಿದೆ.

- Advertisement -

Latest News

error: Content is protected !!