Tuesday, June 30, 2026
HomeUncategorizedಗುಂಡು ಹೊಡೆದು ಸಾಯಿಸುವುದಾದರೆ ಸಾಯಿಸಿ,ನಾನು ಗಣೇಶೋತ್ಸವ ಮಾಡುತ್ತೇನೆ ;ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ಗುಂಡು ಹೊಡೆದು ಸಾಯಿಸುವುದಾದರೆ ಸಾಯಿಸಿ,ನಾನು ಗಣೇಶೋತ್ಸವ ಮಾಡುತ್ತೇನೆ ;ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

- Advertisement -
- Advertisement -

ವಿಜಯಪುರ: ಹಿಂದೂಗಳ ಹಬ್ಬಕ್ಕೆ ಕೋವಿಡ್ ನೆಪವೊಡ್ಡಿ ಸರ್ಕಾರ ನಿರ್ಬಂಧ ಹೇರಿದರೆ ತಾನು ಸಹಿಸುವುದಿಲ್ಲ‌ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಭಾನುವಾರ, ಶನಿವಾರ ಮಾತ್ರ ಕೊರೊನಾ ಬರುತ್ತಾ?. 10 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವಾಗ ಕೊರೊನಾ ನೆನಪಾಗಲ್ವಾ. ಗಣಪತಿ ಬಂದಾಗ ಮಾತ್ರ ಕೊರೊನಾ ಬರುತ್ತಾ? ಎಂದು ಪ್ರಶ್ನಿಸಿದ್ದಾರೆ.

ಗಣೇಶ ಹಬ್ಬಕ್ಕೆ ‌ನಿರ್ಬಂಧ ಹಾಕಿದರೆ, ನಾವು ಸರ್ಕಾರದ ಆದೇಶ‌ ಪಾಲನೆ ಮಾಡುವುದಿಲ್ಲ. ನನ್ನ ಮೇಲೆ ಗುಂಡು ಹಾರಿಸಿದರೂ ಪರವಾಗಿಲ್ಲ, ಗಣೇಶ ಹಬ್ಬಕ್ಕೆ ನಿರ್ಬಂಧ ಹಾಕಲು ಬೀಡೋದಿಲ್ಲ. ನೀವೆಲ್ಲಾ ಸಭೆ-ಸಮಾರಂಭಗಳನ್ನು ನಡೆಸುತ್ತೀರಿ. ಕರ್ನಾಟಕದಲ್ಲಿ ಉಳಿದವರಿಗೆ ಹಬ್ಬ ಮಾಡಲು ಬಿಡುತ್ತೀರಿ. ಆದರೆ, ನಮಗೆ ಯಾಕಿಲ್ಲ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ. ಸಿಎಂ ಅನುಮತಿ ಕೊಟ್ಟಿದ್ದು, ಆದೇಶನೂ ಮಾಡಿದ್ದಾರೆ ಎಂದರು.

ಇನ್ನು ವಿಜಯಪುರದಲ್ಲಿ ಆಫ್ಘಾನ್ ವಿಚಾರವಾಗಿ ಮಾತನಾಡಿದ ಅವರು ಬಾಲಿವುಡ್‍ನ ಸೂಪರಸ್ಟಾರ್ ಖಾನ್‍ಗಳು ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಅನ್ನೋ ಖಾನ್ ನಟರು ಅಫ್ಘಾನ್ ಗೆ ಹೋಗಿ ಜೀವನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬುದ್ಧಿಜೀವಿಗಳು ಲದ್ದಿ ತಿಂದಿದ್ದಾರಾ? ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ. ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲ..? ಡಿಕೆಶಿ ಯಾಕೆ ಮಾತಾಡಲ್ಲ..? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಯಿಂದ ನಾವು ಸುರಕ್ಷಿತವಾಗಿದ್ದೇವೆ ಎಂದು ಅಭಿಪ್ರಾಯಪಟ್ಟ ಯತ್ನಾಳ್, ಅಫ್ಘಾನ್ ನಲ್ಲಿರುವ ಹಿಂದು-ಸಿಖ್ ಬಿಟ್ಟರೆ ಉಳಿದ ಧರ್ಮದವರಿಗೆ ದೇಶಕ್ಕೆ ಪ್ರವೇಶ ಕೊಡಬಾರದು ಎಂದು ಒತ್ತಾಯಿಸಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಯತ್ನಾಳ್, ರಾಹುಲ್ ಗಾಂಧಿ ಮುಸ್ಲಿಂ ಜನಾಂಗದವರಂತೆ ವರ್ತಿಸುತ್ತಾರೆ. ಅವರು ಹಿಂದೂನೂ ಅಲ್ಲ, ಕ್ರಿಶ್ಚಿಯನ್ನೂ ಅಲ್ಲ ಎಂದು ಕುಟುಕಿದರು. ಅಲ್ಲದೆ ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಗರಂ ಆದರು.

- Advertisement -

Latest News

error: Content is protected !!