Saturday, June 27, 2026
Homeತಾಜಾ ಸುದ್ದಿಪ್ರಖ್ಯಾತ ಸೈಕಲ್ ಕವಿ ಐರಸಂಗ ಇನ್ನು ನೆನಪು ಮಾತ್ರ!..

ಪ್ರಖ್ಯಾತ ಸೈಕಲ್ ಕವಿ ಐರಸಂಗ ಇನ್ನು ನೆನಪು ಮಾತ್ರ!..

- Advertisement -
- Advertisement -

ಧಾರವಾಡ: ನೂರಾರು ಆಶುಕವಿತೆಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದ ಸೈಕಲ್ ಕವಿ ಎಂದೇ ಪ್ರಖ್ಯಾತರಾಗಿದ್ದ ಆಶುಕವಿ ಐರಸಂಗ(91) ನಿಧನರಾಗಿದ್ದಾರೆ. ಸೈಕಲ್ ಮೇಲೆಯೇ ತಮ್ಮೆಲ್ಲಾ ಸಾಹಿತ್ಯ ಚಟುವಟಿಕೆ, ಓಡಾಟಗಳನ್ನು ನಡೆಸುತ್ತಿದ್ದ ಸರಳ ವ್ಯಕ್ತಿತ್ವದ ಇವರು 50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯಕೊಡುಗೆಗೆ ಧಾರವಾಡದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.

ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು,ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆ ಬಂದಿದ್ದರು.ವಿಸಿ ಐರಸಂಗ ಅವರು ಮಗ, ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!