Monday, June 8, 2026
Homeತಾಜಾ ಸುದ್ದಿತಂಗಿಯ ಮಾಂಗಲ್ಯ ಸರವನ್ನೇ ಎಗರಿಸಿದ ಅಣ್ಣ- 3.50 ಲಕ್ಷ ಮೌಲ್ಯದ ಚಿನ್ನದ ಸರಕ್ಕೆ ಕಣ್ಣು ಹಾಕಿದ...

ತಂಗಿಯ ಮಾಂಗಲ್ಯ ಸರವನ್ನೇ ಎಗರಿಸಿದ ಅಣ್ಣ- 3.50 ಲಕ್ಷ ಮೌಲ್ಯದ ಚಿನ್ನದ ಸರಕ್ಕೆ ಕಣ್ಣು ಹಾಕಿದ ಭೂಪ!..

- Advertisement -
- Advertisement -

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಸಮೀಪ ಇರುವ ಬಟ್ಟೆ ಅಂಗಡಿಗೆ ಹೋಗಿದ್ದ ವೇಳೆ ತನ್ನ ಸೋದರಿಯ ಮಾಂಗಲ್ಯ ಸರವನ್ನೇ ಕಳವು ಮಾಡಿದ್ದ ಆರೋಪಿ ಈಗ ಪೋಲೀಸರ ಅತಿಥಿ ಯಾಗಿದ್ದಾನೆ. ಹೂಟಗಳ್ಳಿ ನಿವಾಸಿ ಸಂತೋಷ್‌ಕುಮಾರ್ (33) ಎಂಬಾತನನ್ನು ಚಿನ್ನದ ಸರ ಕಳವು ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 70 ಗ್ರಾಂ ತೂಕದ 3.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಅಣ್ಣ, ತಂಗಿ ಇಬ್ಬರು ಬಟ್ಟೆ ಅಂಗಡಿಗೆ ಹೋಗಿ ವಾಪಸ್ ಮನೆಗೆ ಹೋದಾಗ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನದ ಸರ ಕಳವಾಗಿರುವುದು ಗೊತ್ತಾಗಿದೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದರು. ವಿಚಾರಣೆ ಮಾಡಿದಾಗ ಮಹಿಳೆಯು ಕೆಲಕಾಲ ತನ್ನ ವ್ಯಾನಿಟಿ ಬ್ಯಾಗ್‌ನ್ನು ಅಣ್ಣನಿಗೆ ನೀಡಿರುವ ವಿಚಾರ ತಿಳಿಯಿತು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಆತನ ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!