Thursday, June 4, 2026
Homeಕ್ರೀಡೆಟೋಕಿಯೋ ಒಲಿಂಪಿಕ್ಸ್:ಅರ್ಜೆಂಟೀನಾ ವಿರುದ್ಧ ಭರ್ಜರಿ ಜಯ ;ಕ್ವಾರ್ಟರ್ ಫೈನಲ್ ಹಂತಕ್ಕೇರಿದ ಭಾರತದ ಹಾಕಿ ತಂಡ!

ಟೋಕಿಯೋ ಒಲಿಂಪಿಕ್ಸ್:ಅರ್ಜೆಂಟೀನಾ ವಿರುದ್ಧ ಭರ್ಜರಿ ಜಯ ;ಕ್ವಾರ್ಟರ್ ಫೈನಲ್ ಹಂತಕ್ಕೇರಿದ ಭಾರತದ ಹಾಕಿ ತಂಡ!

- Advertisement -
- Advertisement -

ಟೊಕಿಯೋ: ಟೊಕಿಯೋ ಒಲಂಪಿಕ್ಸ್ ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಸಿಕ್ಕಿದ್ದು, ಅರ್ಜೆಂಟೀನಾ ತಂಡವನ್ನು 3 -1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.

ಇದು ಭಾರತ ತಂಡದ ಪಾಲಿಗೆ ದೊಡ್ಡ ಗೆಲುವಾಗಿದ್ದು,ಹಾಲಿ ಚಾಂಪಿಯನ್ ಆಗಿರುವ ಅರ್ಜೈಂಟಿನಾ ತಂಡವನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಇದೀಗ ಒಟ್ಟು ಮೂರು ಗೆಲುವು ಒಂದು ಸೋಲಿನೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಗುರುವಾರ ನಡೆದ ಪಂದ್ಯದ 43 ನೇ ನಿಮಿಷದಲ್ಲಿ ಭಾರತದ ವರುಣ್ ಕುಮಾರ್ ಗೋಲ್ ಬಾರಿಸಿದ್ದು, ಬಳಿಕ ಪಂದ್ಯದ ಮುಕ್ತಾಯದ ನಿಮಿಷಗಳಲ್ಲಿ ವಿವೇಕ್ ಸಾಗರ್ ಪ್ರಸಾದ್ ಮತ್ತು ಹರ್ಮನ್‍ಪ್ರೀತ್ ಸಿಂಗ್ ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಮುಂದಿನ ಪೂಲ್ ಹಂತದ ಪಂದ್ಯದಲ್ಲಿ ಭಾರತ ಅತಿಥೇಯ ಜಪಾನ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಇದೆ ಶುಕ್ರವಾರ ನಡೆಯಲಿದೆ.

- Advertisement -

Latest News

error: Content is protected !!