Friday, June 26, 2026
Homeಕರಾವಳಿಬೆಳ್ತಂಗಡಿ:ನಿಲ್ಲಿಸಿದ್ದ ಆಟೋಗೆ ಗುದ್ದಿದ ಕಂಟೇನರ್ ಲಾರಿ ; ಎಸ್ಕೇಪ್ ಆಗಲು ಹೊರಟವನು ಸದ್ಯ ಪೋಲೀಸರ ಅತಿಥಿ!

ಬೆಳ್ತಂಗಡಿ:ನಿಲ್ಲಿಸಿದ್ದ ಆಟೋಗೆ ಗುದ್ದಿದ ಕಂಟೇನರ್ ಲಾರಿ ; ಎಸ್ಕೇಪ್ ಆಗಲು ಹೊರಟವನು ಸದ್ಯ ಪೋಲೀಸರ ಅತಿಥಿ!

- Advertisement -
- Advertisement -

ಬೆಳ್ತಂಗಡಿ: ನಿಲ್ಲಿಸಿದ್ದ ಆಟೋ ರಿಕ್ಷಾಗೆ ಕಂಟೇನರ್ ಲಾರಿಯೊಂದು ಗುದ್ದಿ ಹೊಡೆದುಕೊಂಡು ಹೋದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದಲ್ಲಿ ಆಟೋ ನಿಲ್ಲಿಸಿ ಅಲ್ಲೇ ಪಕ್ಕದಲ್ಲಿದ್ದ ಅಂಗಡಿಗೆ ಆಟೋ ಚಾಲಕ ತೆರಳಿದ್ದರು.ಅದೇ ಸಮಯದಲ್ಲಿ ಅತಿಯಾದ ವೇಗದಿಂದ ಬಂದ ಕಂಟೇನರ್ ಲಾರಿಯೊಂದು ನಿಲ್ಲಿಸಿದ ಆಟೋಗೆ ಗುದ್ದಿದ್ದಲ್ಲದೆ, ಹಿಂತುರುಗಿ ನೋಡದೆ ಸೀದಾ ಮಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾನೆ.

ಕೂಡಲೇ ಅಲ್ಲಿದ್ದ ಸ್ಥಳೀಯ ಯುವಕರು ಬೈಕ್ ಮೂಲಕ ಗಾಡಿಯನ್ನು ಚೇಸ್ ಮಾಡಿದ್ದಾರೆ.ಅಷ್ಟರಲ್ಲಾಗಲೇ ಕಂಟೇನರ್ ಗಾಡಿಯು ಮಡಂತ್ಯಾರ್ ತಲುಪಿದ್ದು, ಅಲ್ಲೇ ಪಕ್ಕದ ಕೋಲ್ಪೆದ ಬೈಲು ಎಂಬಲ್ಲಿ ಸ್ಥಳೀಯರು ಲಾರಿಯನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ.ಸಾಧ್ಯ ಇದೀಗ ಚಾಲಕ ಪೋಲೀಸರ ಅಥಿತಿಯಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಎಳೆದು ತಂದಿದ್ದಾರೆ ಎಂದು ಹೇಳಲಾಗಿದೆ.



- Advertisement -

Latest News

error: Content is protected !!