Wednesday, June 3, 2026
Homeತಾಜಾ ಸುದ್ದಿಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ವಿಜಯಪುರದ ಮಗು

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ವಿಜಯಪುರದ ಮಗು

- Advertisement -
- Advertisement -

ವಿಜಯಪುರ: ಒಂದು ವರ್ಷ ಹನ್ನೊಂದು ತಿಂಗಳ ಮಗುವೊಂದು ತನ್ನಲ್ಲಿರುವ ಅಸಾಮಾನ್ಯ ಬುದ್ಧಿಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಸಾಧಕರ ಪಟ್ಟಿಯಲ್ಲಿ ತನ್ನ ಹೆಸರು ದಾಖಲಿಸುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.


ಮೂಲತಃ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವರಾದ ಚಂದ್ರು ಹಾಗೂ ಶಿಲ್ಪಾ ಗಣಾಚಾರಿ ದಂಪತಿಯ ಪುತ್ರ ಗಗನದೀಪ್ ಗಣಾಚಾರಿ ಈ ಸಾಧನೆಗೆ ಭಾಜನವಾಗಿರುವ ಅತೀ ಕಿರಿಯ ಮಗು. ತಂದೆ ಮುದ್ದೇಬಿಹಾಳ ಪಟ್ಟಣದ ಅಹಲ್ಯಾದೇವಿ ಹೋಸ್ಕರ ಪತ್ತಿನ ಸಹಕಾರಿ ಸಂಘದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.


 ಗಗನ್‌ದೀಪ್‌ಗೆ ಹಲವು ಕಲೆಗಳು ಕರಗತವಾಗಿವೆ. ಆತನ ಜ್ಞಾನಶಕ್ತಿಯನ್ನು ಕಂಡು ಸ್ವತಃ ತಾಯಿಯೇ ಬೆರಗಾಗಿದ್ದು ಅದನ್ನು ವಿಡಿಯೋ ಮಾಡಿ ಇಂಡಿಯಾ ಬುಕ್ ಆಫ್ ಸಂಸ್ಥೆಗೆ ಕಳಿಸಿದಾಗ ಅಲ್ಲಿಂದ ಬಾಲಕನ ರೆಕಾಡ್ಸ್‌ ಅಸಾಮಾನ್ಯ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಡಾ.ಬಿಷಪ್‌ರಾಯ್ ಚೌಧರಿ ಪ್ರಶಂಸನಾಪತ್ರ ಕಳುಹಿಸಿದ್ದಾರೆ.

- Advertisement -

Latest News

error: Content is protected !!