Sunday, May 12, 2024
Homeತಾಜಾ ಸುದ್ದಿಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸೆಕೆಂಡರಿ ಸ್ಕೂಲ್ ಉದ್ಘಾಟನೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸೆಕೆಂಡರಿ ಸ್ಕೂಲ್ ಉದ್ಘಾಟನೆ

spot_img
- Advertisement -
- Advertisement -

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಸೆಕೆಂಡರಿ ಸ್ಕೂಲ್ ಅನ್ನು ಶನಿವಾರ ವಿದ್ಯಾಕೇಂದ್ರದ ಪದವಿ ಸಭಾಂಗಣದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಿದರು.

ಈ ವರ್ಷ ಸರಸ್ವತಿ ಪೂಜೆಗೆ ಹೊಸ ಶಿಕ್ಷಣ ನೀತಿಯ ಪುಸ್ತಕ ಹೊರತರುವ ಯೋಚನೆ ಇದೆ ಎಂದರು.

ಸ್ವಾವಲಂಬಿ, ಸ್ವಾಭಿಮಾನದ ಸಮಾಜದ ನಿರ್ಮಾಣಕ್ಕೆ ಸ್ವಾತಂತ್ರ್ಯ ಬಂತು, ಶಿಕ್ಷಣ ವ್ಯವಸ್ಥೆಯೂ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸಬೇಕು ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ವೃತ್ತಿಪರ ಶಿಕ್ಷಣವನ್ನು ನೀಡುವ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗುತ್ತದೆ, ಅಗ್ನಿಪಥ್ ಯೋಜನೆಯಿಂದ ಯುವಜನತೆಗೆ ಪ್ರಯೋಜನವಾಗಲಿದ್ದು, ಇದಕ್ಕೆ ವಿನಾ ಕಾರಣ ವಿರೋಧ ವ್ಯಕ್ತವಾಗಿದೆ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕದಲ್ಲೂ ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಅಪಸ್ವರ ಎತ್ತಲಾಗಿದೆ, ಆದರೆ ಇಂದು ಸಂಸ್ಕಾರಭರಿತ ಶಿಕ್ಷಣ ಅಗತ್ಯ ಎಂದರು.

ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಬಂಟ್ವಾಳ ತಹಸೀಲ್ದಾರ್ ಡಾ.ಸ್ಮಿತಾ ರಾಮು, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್, ಡಾ.ಕಮಲಾ ಪ್ರಭಾಕರ ಭಟ್, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ.ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ತಿರುಮಲೇಶ್ವರ ಪ್ರಶಾಂತ್ ಸ್ವಾಗತಿಸಿದರು. ಪದವಿ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ಅಧ್ಯಾಪಕಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ಭಗವದ್ಗೀತೆ ಹದಿನೆಂಟು ಅಧ್ಯಾಯಗಳನ್ನು ಪೂರ್ತಿ ಕಂಠಪಾಠ ಮಾಡಿದ ವಾಸವಿ. ಕೆ.ಸಿ. ಅವರನ್ನು ಗೌರವಿಸಲಾಯಿತು.

- Advertisement -
spot_img

Latest News

error: Content is protected !!