Monday, May 6, 2024
Homeಕರಾವಳಿಉಡುಪಿಕುಂದಾಪುರ: ತ್ರಿಶಂಕು ಸ್ಥಿತಿಯಲ್ಲಿ ನೈಕಂಬಿ ಗ್ರಾಮಸ್ಥರು: ಪರ್ಯಾಯ ಸಂಚಾರ ವ್ಯವಸ್ಥೆ ಇಲ್ಲದೇ ಪರದಾಟ

ಕುಂದಾಪುರ: ತ್ರಿಶಂಕು ಸ್ಥಿತಿಯಲ್ಲಿ ನೈಕಂಬಿ ಗ್ರಾಮಸ್ಥರು: ಪರ್ಯಾಯ ಸಂಚಾರ ವ್ಯವಸ್ಥೆ ಇಲ್ಲದೇ ಪರದಾಟ

spot_img
- Advertisement -
- Advertisement -

ಕುಂದಾಪುರ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಚಿತ್ತೂರು ಗ್ರಾಮ ಪಂಚಾಯಿತಿಯ ಹಳೆಯಮ್ಮ ದೇವಸ್ಥಾನದ ಸಮೀಪ ನೈಕಂಬ್ರಿಯ ಹೊಳೆಗೆ ನಿರ್ಮಿಸಿದ್ದ ತಾತ್ಕಾಲಿಕ ಮರದ ಸೇತುವೆ ಮುರಿದು ಬಿದ್ದಿದೆ. ಇದರಿಂದಾಗಿ ನೈಕಂಬಿ ಗ್ರಾಮದ ಅರ್ಧದಷ್ಟು ಜನರು ಪರ್ಯಾಯ ಸಂಚಾರ ವ್ಯವಸ್ಥೆ ಇಲ್ಲದೇ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ.

1,900 ರಷ್ಟು ಜನಸಂಖ್ಯೆ ಹೊಂದಿರುವ ನೈಕಂಬಿ ಗ್ರಾಮದಲ್ಲಿ 135 ಮನೆಗಳಿವೆ. ಹಳೆಯಮ್ಮ ದೇವಸ್ಥಾನದ ಬದಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಬದಿ ಎಂದು ಗ್ರಾಮವನ್ನು ಎರಡು ಭಾಗವಾಗಿ ವಿಗಂಡಿಸಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ ಭಾಗದಲ್ಲಿ ಕನಿಷ್ಠ 75 ಮನೆಗಳಿವೆ. ಚಿತ್ತೇರಿ ಗಣಪತಿ ದೇವಸ್ಥಾನವೂ ಇದೆ. ಈ ಭಾಗದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕುಂದಾಪುರ, ಕೊಲ್ಲೂರು ಮುಂತಾದ ಕಡೆಗಳಿಗೆ ತೆರಳಲು ಈ ಸೇತುವೆಯನ್ನೆ ಅವಲಂಬಿಸಬೇಕಾಗಿದೆ.

ಹೆಮ್ಮಾಡಿ-ಕೊಲ್ಲೂರು ರಾಜ್ಯ ಹೆದ್ದಾರಿಯಿಂದ ನೈಕಂಬ್ಬಿಗೆ ತೆರಳುವ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಗೊಳಿಸಲಾಗಿತ್ತು. ಹಳೆಯಮ್ಮ ದೇವಸ್ಥಾನದವರೆಗೂ ಬಂದಿದ್ದ ರಸ್ತೆಯ ಮುಂದುವರೆದ ಭಾಗವಾಗಿ ನೈಕಂಬ್ಬಿ ಹೊಳೆಗೆ ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಮರದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಕೆಲ ವರ್ಷಗಳಿಂದ ಈ ಭಾಗದ ಜನರು ತಮ್ಮ ದೈನಂದಿನ ಓಡಾಟಕ್ಕಾಗಿ ಈ ಸೇತುವೆಯನ್ನೆ ಅವಲಂಬಿಸಿದ್ದರು. ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೇತುವೆಯ ಇಕ್ಕೆಲಗಳಲ್ಲಿನ ಮಣ್ಣು ಕೊಚ್ಚಿ ಹೋಗಿ, ಸೇತುವೆ ಮುರಿದು ಹರಿಯುವ ನೀರಿಗೆ ಬಿದ್ದಿದೆ.

- Advertisement -
spot_img

Latest News

error: Content is protected !!