- Advertisement -
![]()
- Advertisement -
ಬೆಳ್ತಂಗಡಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿ ಹಲವಾರು ಜನಪರ ಕಾರ್ಯಗಳನ್ನು ಮಾಡಿರುವ ಹಿರಿಯ ರಾಜಕಾರಣಿ ನೇರ ನಡೆ ನುಡಿಯ ನಾಯಕರಾದ ಶ್ರೀ ಕೆ.ವಸಂತ ಬಂಗೇರ ರವರ ನುಡಿ ನಮನ ಕಾರ್ಯಕ್ರಮವು , ದಿನಾಂಕ 25.05.2024 ನೇ ಶನಿವಾರ ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ, ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಚಿವರುಗಳು,ಮಾಜಿ ಸಚಿವರು.ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು,ಕಾರ್ಯಕರ್ತರು ಭಾಗವಹಿಸಬೇಕಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವಿನಂತಿ ಮಾಡಿದೆ.
- Advertisement -


