- Advertisement -
![]()
- Advertisement -
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಖಾಸಗಿ ಕಾಫಿ ತೋಟದಲ್ಲಿ ಒಂಟಿ ಸಲಗವೊಂದು ಸಾವನ್ನಪ್ಪಿದ್ದು, ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಅರಣ್ಯ ಇಲಾಖೆಯು ಈ ಆನೆಯನ್ನು ಸೆರೆ ಹಿಡಿಯಲು ತಯಾರಿ ನಡೆಸಿತ್ತು ಎನ್ನಲಾಗಿದೆ. ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇನ್ನು ಘಟನೆಯ ಕುರಿತು ಪ್ರಾಣಿ ಪ್ರಿಯರು ತನಿಖೆ ಮಾಡಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
- Advertisement -


