Monday, May 20, 2024
Homeಕರಾವಳಿಉಡುಪಿಕರಾವಳಿಯಲ್ಲಿ  ಕುಂಭದ್ರೋಣ ಮಳೆ : ಉಡುಪಿಯ ಕಟಪಾಡಿಯಲ್ಲಿ ನೆರೆಯಲ್ಲೇ ಶವ ಸಾಗಿಸಿದ ಜನ

ಕರಾವಳಿಯಲ್ಲಿ  ಕುಂಭದ್ರೋಣ ಮಳೆ : ಉಡುಪಿಯ ಕಟಪಾಡಿಯಲ್ಲಿ ನೆರೆಯಲ್ಲೇ ಶವ ಸಾಗಿಸಿದ ಜನ

spot_img
- Advertisement -
- Advertisement -

ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಅನೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕೆಲವೊಂದು ಗ್ರಾಮಗಳಂತೂ ಅಕ್ಷರಶಃ ದ್ವೀಪಗಳಂತಾಗಿವೆ.

ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿರುವ ಕಾರಣ ಶವವನ್ನು ನೆರೆ ನೀರಿನಲ್ಲಿಯೇ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ನಡೆಸಿದ ಘಟನೆ ನಡೆದಿದೆ. ಇಲ್ಲಿನ ಕಾಪು ತಾಲೂಕು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ದೇವರಕುದ್ರು ಎಂಬಲ್ಲಿ ಬೊಮ್ಮನ್ ತೋಟದ ರಾಮಪ್ಪ ಕುಂದರ್ ಪತ್ನಿ ಬೇಬಿ ಪೂಜಾರಿ ಅವರ ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಹೊತ್ತುಕೊಂಡು ಹೋಗಬೇಕಾಯಿತು

ದೇವರಕುದ್ರುಗೆ ಸಂಪರ್ಕ ರಸ್ತೆ ಇದ್ದರೂ ರಸ್ತೆ, ತೋಟದಲ್ಲಿ ನೆರೆ ನೀರು ತುಂಬಿದ್ದ ಕಾರಣದಿಂದ  ಆಂಬ್ಯುಲೆನ್ಸ್ ಮನೆಯವರೆಗೆ ತಲುಪಲು ಸಾಧ್ಯವಾಗಿಲ್ಲ.  

ಹಾಗಾಗಿ ಅರ್ಧ ಕಿಲೋ ಮೀಟರ್ ನೆರೆಯ ನೀರಿನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಬಳಿಕ ಗ್ರಾ.ಪಂ.ನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು.

- Advertisement -
spot_img

Latest News

error: Content is protected !!