Friday, June 5, 2026
Homeಕರಾವಳಿಉಡುಪಿಕುಂದಾಪುರ: 2 ಲಾರಿಗಳಲ್ಲಿ ಹಿಂಸಾತ್ಮಕವಾಗಿ 52 ಜಾನುವಾರುಗಳ ಸಾಗಾಟ, ನಾಲ್ವರ ಬಂಧನ

ಕುಂದಾಪುರ: 2 ಲಾರಿಗಳಲ್ಲಿ ಹಿಂಸಾತ್ಮಕವಾಗಿ 52 ಜಾನುವಾರುಗಳ ಸಾಗಾಟ, ನಾಲ್ವರ ಬಂಧನ

- Advertisement -
- Advertisement -

ಕುಂದಾಪುರ: ಇಲ್ಲಿನ ಅಮಾಸೆಬೈಲಿನ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಎರಡು ಲಾರಿಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 52 ಜಾನುವಾರಗಳನ್ನು ವಶಕ್ಕೆ ಪಡೆದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದಾವಣಗೆರೆಯ ಮೆಹಬೂಬ್, ಇಮ್ರಾನ್, ಬೆಳಗಾವಿ ಜಿಲ್ಲೆಯ ಬಾಪು ಸಾಹೇಬ್, ಆಸಿಫ್ ಎಂದು ಗುರತಿಸಲಾಗಿದೆ.

ಎರಡು ಲಾರಿಗಳಲ್ಲಿ ವಾಹನಗಳಲ್ಲಿ ಕ್ರಮವಾಗಿ 24 ಮತ್ತು 28 ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳು, ವಾಹನ ಹಾಗೂ ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!