Sunday, June 7, 2026
Homeಕರಾವಳಿಮಂಗಳೂರು: ಸರಕಾರಿ ಹಾಸ್ಟೆಲ್ ನ ಹೊದಿಕೆಗಳನ್ನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡಿದ ಪತಿ, ಪೊಲೀಸರಿಗೆ...

ಮಂಗಳೂರು: ಸರಕಾರಿ ಹಾಸ್ಟೆಲ್ ನ ಹೊದಿಕೆಗಳನ್ನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡಿದ ಪತಿ, ಪೊಲೀಸರಿಗೆ ದೂರು ನೀಡಿದ ಪತ್ನಿ

- Advertisement -
- Advertisement -

ಮಂಗಳೂರು: ಸರಕಾರಿ ಹಾಸ್ಟೆಲ್ನಲ್ಲಿ ಅಡುಗೆ ನೌಕರನಾಗಿರುವ ಪತಿಯ ಮೇಲೆ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ .

ಪಡು ಪಣಂಬೂರು ಗ್ರಾಮದ ನಿವಾಸಿ ಸರಕಾರಿ ಹಾಸ್ಟೆಲ್ನಲ್ಲಿ ಅಡುಗೆ ಕೆಲಸದಲ್ಲಿರುವ ಕೊರಗಪ್ಪ ಪೂಜಾರಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿ ದೂರು ದಾಖಲಿಸಿದ್ದಾರೆ.

ಕೊರಗಪ್ಪ ಪೂಜಾರಿ

ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ, ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡಿದ್ದಾನೆ. ಕೆಲವನ್ನು ಮಾರಾಟ ಮಾಡಿದ್ದು, ಮನೆಗೂ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಆತನ‌ ವಿರುದ್ಧ ಕಿರುಕುಳ, ಜೀವಬೆದರಿಕೆ ದೂರನ್ನೂ ಪತ್ನಿ ದಾಖಲಿಸಿದ್ದಾರೆ.

ಪತಿಯು ಇನ್ನೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕೆಲಸ ಮಾಡುವ ಹಾಸ್ಟೆಲ್‌ಗೆ ಆ ಮಹಿಳೆ ತಹಶೀಲ್ದಾರ್ ಸೋಗಿನಲ್ಲಿ ತೆರಳಿ, ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆಕೆ ದೂರಿನಲ್ಲಿ‌ ಆರೋಪಿಸಿದ್ದಾರೆ. ಅಲ್ಲದೆ ಹಾಸ್ಟೆಲ್ಗೆ ತರುವ ಅಡುಗೆ ಸಾಮಗ್ರಿಗಳನ್ನೂ ಕೂಡ ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಅನೈತಿಕ ಸಂಬಂಧ, ಸರ್ಕಾರಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.‌

- Advertisement -

Latest News

error: Content is protected !!