Saturday, May 4, 2024
Homeತಾಜಾ ಸುದ್ದಿಮೊಘಲರು ನಮ್ಮ ನಾಯಕರುಗಳಾಗಲು ಹೇಗೆ ಸಾಧ್ಯ? ಆಗ್ರಾ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಹೆಸರು: ಯೋಗಿ ಆದಿತ್ಯನಾಥ್

ಮೊಘಲರು ನಮ್ಮ ನಾಯಕರುಗಳಾಗಲು ಹೇಗೆ ಸಾಧ್ಯ? ಆಗ್ರಾ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಹೆಸರು: ಯೋಗಿ ಆದಿತ್ಯನಾಥ್

spot_img
- Advertisement -
- Advertisement -

ಲಖನೌ: ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಘಲ್​ ಮ್ಯೂಸಿಯಂ ಹೆಸರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬದಲಿಸಿದ್ದಾರೆ. ನಾವು ಭಾರತೀಯರು..ನಮಗೆ ಮೊಘಲರು ಎಂದಿಗೂ ಆದರ್ಶವಲ್ಲ ಎಂದು ಹೇಳಿದ ಯೋಗಿ, ಮ್ಯೂಸಿಯಂಗೆ ‘ಛತ್ರಪತಿ ಶಿವಾಜಿ ಮಹಾರಾಜ’ರ ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಗೊಂಡಿದ್ದು, ‘ರಾಷ್ಟ್ರೀಯತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಅಸಾಧ್ಯ. ದಬ್ಬಾಳಿಕೆ ನಡೆಸಿದ ಮೊಘಲರು ನಮ್ಮ ಹೀರೊಗಳಾಗಲು ಹೇಗೆ ಸಾಧ್ಯ?,’ ಎಂದು ಸಿಎಂ ಆದಿತ್ಯನಾಥ್‌ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

‘ಮರಾಠ ಸಾಮ್ರಾಟ ಶಿವಾಜಿ ಹೆಸರು ನಮ್ಮಲ್ಲಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಭಾವನೆಯನ್ನು ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಮ್ಯೂಸಿಯಂಗೆ ಮೊಗಲ್‌ ಬದಲು ಶಿವಾಜಿ ಹೆಸರು ಇರಿಸಲು ನಿರ್ಧರಿಸಲಾಗಿದೆ,’ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!