Thursday, August 20, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಲಾಯಿಲದಲ್ಲಿ ನಿಲ್ಲದ ಕಾನೂನು ಬಾಹಿರ ಕಟ್ಟಡ ಕಾಮಗಾರಿಗಳು

ಬೆಳ್ತಂಗಡಿ : ಲಾಯಿಲದಲ್ಲಿ ನಿಲ್ಲದ ಕಾನೂನು ಬಾಹಿರ ಕಟ್ಟಡ ಕಾಮಗಾರಿಗಳು

- Advertisement -
- Advertisement -

ಬೆಳ್ತಂಗಡಿ : ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಟ್ಟಡಗಳು ಕಾನೂನು ಬಾಹಿರವಾಗಿ ಕಾಮಗಾರಿಗಳು ರಾಜರೋಷವಾಗಿ ನಡೆಯುತ್ತಿದೆ. ಅಧಿಕಾರಿಗಳು ಎಷ್ಟೇ ನೋಟಿಸ್ ಜಾರಿ ಮಾಡಿದ್ರೂ ಕ್ಯಾರೆ ಮಾಡುತ್ತಿಲ್ಲ ಕಟ್ಟಡ ಮಾಲೀಕರು ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್ ಅನಧಿಕೃತ ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ರೂ ಕಟ್ಟಡ ಮಾಲೀಕರು ಮಾತ್ರ ತಮ್ಮ ಅಕ್ರಮ/ಅನಧಿಕೃತ ಕಾಮಗಾರಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಲಾಯಿಲದ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ವಾಣಿಜ್ಯ ಕಟ್ಟಡ ಕಾಮಗಾರಿ ನಡೆಸುತ್ತಿರುವ ಮಹಮ್ಮದ್ ಸಾಧಿಕ್ ಮತ್ತು ಲಾಯಿಲ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತೋಮಸ್.ಸಿ.ಎಂ ಎಂಬವರ ಕಟ್ಟಡ ನಿರ್ಮಾಣ ಕಾಮಗಾರಿ.

ಪ್ರಕರಣ-1: ಲಾಯಿಲ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಹಮ್ಮದ್ ಸಾಧಿಕ್ ಬಿನ್ ಅಬ್ದುಲ್ ಕರೀಂ, ನ್ಯೂ ಮೈನಾ ಎಂಬವರು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಪಡೆದ ಅನುಮತಿ ಮತ್ತು ನಕ್ಷೆಯನ್ನು ಬದಲಾವಣೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಕಾಮಗಾರಿ ಕೆಲಸ ಸ್ಥಗಿತ ಮಾಡುವಂತೆ ಆ.11 ರಂದು ನೋಟಿಸ್ ಜಾರಿ ಮಾಡಿದ್ರೂ ಇದಕ್ಕೆ ಕ್ಯಾರೆ ಮಾಡದೆ ಮತ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದಾರೆ.

ಪ್ರಕರಣ-2: ಲಾಯಿಲ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಮಾರ್ಜೀನ್ ಮತ್ತು ಗ್ರಾಮ ಪಂಚಾಯತಿನಿಂದ ಯಾವುದೇ ಅನುಮತಿ ಪಡೆಯದೆ ತೋಮಸ್.ಸಿ.ಎಂ ಬಿನ್ ಮ್ಯಾಥ್ಯೂ ಎಂಬವರು ತನ್ನ ಮಗ ಅರುಣ್ ತೋಮಸ್ ಉಸ್ತುವಾರಿಯಲ್ಲಿ ಕಾರು ಪಾರ್ಕಿಂಗ್ ಹೆಸರಲ್ಲಿ ಅಕ್ರಮ ಕಟ್ಟಡ ಕಾಮಗಾರಿ ಕೆಲಸವನ್ನು ಮಾಡುತ್ತಿರುವ ಬಗ್ಗೆ ಆ.18 ರಂದು ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿ ಕೆಲಸ ಸ್ಥಗಿತ ಮಾಡುವಂತೆ ನೋಟಿಸ್ ಜಾರಿ ಮಾಡಿದ್ರೂ ಕ್ಯಾರೆ ಮಾಡದೆ ಕಾಮಗಾರಿ ಕೆಲಸ ಮಾಡುತ್ತಿದ್ದಾರೆ.

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆ ಕೆಲಸಗಳು ನಡೆಯುತ್ತಿದ್ದರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

- Advertisement -

Latest News

error: Content is protected !!