- Advertisement -
- Advertisement -
ಕಟೀಲು: ಮುಂದಿನ ಏಪ್ರಿಲ್‌ನಲ್ಲಿ ನಡೆಯಲಿರುವ ಕಟೀಲು ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ಬ್ರಹ್ಮರಥದಲ್ಲಿ ಉತ್ಸವ ನಡೆಯಲಿದೆ.
ದಾನಿಯೊಬ್ಬರು ಸೇವಾ ರೂಪದಲ್ಲಿ ನಿರ್ಮಿಸಿಕೊಡುತ್ತಿರುವ ಈ ರಥವು 50 ಅಡಿ ಎತ್ತರ ಹಾಗೂ ಆರು ಚಕ್ರಗಳನ್ನು ಹೊಂದಿರಲಿದೆ. ಉಡುಪಿಯ ಶಿಲ್ಪಿ ಸುದರ್ಶನ ಆಚಾರ್ಯರ ನೇತೃತ್ವದಲ್ಲಿ 12 ಮಂದಿ ಶಿಲ್ಪಿಗಳು ಕಳೆದ ಒಂದೂವರೆ ವರ್ಷಗಳಿಂದ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೊಯ್ಸಳ ಶೈಲಿಯ ಕೆತ್ತನೆಗಳು, ಸಿಂಹ, ಆನೆ, ಹಂಸ, ಗಜಪಕ್ಷಿ ಸೇರಿದಂತೆ ವಿವಿಧ ಕಲಾಕೃತಿಗಳು ಹಾಗೂ ಸಮುದ್ರಮಥನ, ಸೀತಾ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ ಸೇರಿದಂತೆ ಪೌರಾಣಿಕ ದೃಶ್ಯಗಳು ರಥದಲ್ಲಿ ಮೂಡಿಬರಲಿವೆ.
ಇದರ ಜೊತೆಗೆ ಐದು ಚಕ್ರಗಳ ಚಂದ್ರಮಂಡಲ ರಥವೂ ನಿರ್ಮಾಣವಾಗುತ್ತಿದ್ದು, ಎರಡೂ ರಥಗಳು ಏಪ್ರಿಲ್‌ನಲ್ಲಿ ದೇವರಿಗೆ ಸಮರ್ಪಣೆಯಾಗಲಿವೆ. 26 ವರ್ಷಗಳ ಶಿಲ್ಪಿ ಅನುಭವ ಹೊಂದಿರುವ ಸುದರ್ಶನ ಆಚಾರ್ಯರು ಹಲವು ದೇವಸ್ಥಾನಗಳಿಗೆ ರಥ ನಿರ್ಮಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ.
- Advertisement -


