Thursday, August 20, 2026
Homeಕರಾವಳಿಮಂಗಳೂರುಸಿಮ್ ನೆಟ್‌ವರ್ಕ್ ಹ್ಯಾಕ್: ಮಂಗಳೂರಿನ ನಿವೃತ್ತ ಉದ್ಯೋಗಿಗೆ ₹2.12 ಕೋಟಿ ಸೈಬರ್ ವಂಚನೆ

ಸಿಮ್ ನೆಟ್‌ವರ್ಕ್ ಹ್ಯಾಕ್: ಮಂಗಳೂರಿನ ನಿವೃತ್ತ ಉದ್ಯೋಗಿಗೆ ₹2.12 ಕೋಟಿ ಸೈಬರ್ ವಂಚನೆ

- Advertisement -
- Advertisement -

ಮಂಗಳೂರು: ಸಿಮ್ ನೆಟ್‌ವರ್ಕ್ ಹ್ಯಾಕ್ ಮಾಡಿ ಅಕ್ರಮವಾಗಿ ನೆಟ್ ಬ್ಯಾಂಕಿಂಗ್ ಅಕ್ಸೆಸ್ ಪಡೆದ ಸೈಬರ್ ವಂಚಕರ ತಂಡವೊಂದು, ಮಂಗಳೂರಿನ ನಿವೃತ್ತ ಖಾಸಗಿ ಉದ್ಯೋಗಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ ₹2.12 ಕೋಟಿಗೂ ಅಧಿಕ ಹಣವನ್ನು ದೋಚಿರುವ ಗಂಭೀರ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನಲ್ಲಿ 50 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ 78 ವರ್ಷದ ವೃದ್ಧರೊಬ್ಬರು ಈ ವಂಚನೆಗೆ ಒಳಗಾಗಿದ್ದಾರೆ.

ಸಂತ್ರಸ್ತ ವೃದ್ಧರು ಮುಂಬೈನ ಕುರ್ಲಾದಲ್ಲಿ ಖರೀದಿಸಿದ್ದ ತಮ್ಮ ಹಳೆಯ ವೊಡಾಫೋನ್ ಮೊಬೈಲ್ ಸಂಖ್ಯೆಯನ್ನು ಕಳೆದ 10 ವರ್ಷಗಳಿಂದ ಬಳಸುತ್ತಿದ್ದು, ಅದನ್ನು ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದ್ದರು. ಜುಲೈ ತಿಂಗಳಲ್ಲಿ ಅವರ ಮೊಬೈಲ್ ನೆಟ್‌ವರ್ಕ್ ಏಕಾಏಕಿ ಬಂದ್ ಆಗಿದೆ. ಮಂಗಳೂರಿನ ವೊಡಾಫೋನ್ ಕಚೇರಿಗೆ ತೆರಳಿ ವಿಚಾರಿಸಿದಾಗ, ವಂಚಕರು ಈ ಸಂಖ್ಯೆಯನ್ನು ಅವರ ಅರಿವಿಗೆ ಬಾರದಂತೆ ಏರ್‌ಟೆಲ್ ನೆಟ್‌ವರ್ಕ್‌ಗೆ ಪೋರ್ಟ್ (Port) ಮಾಡಿಸಿ ಬೇರೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಕೂಡಲೇ ಅವರು ಏರ್‌ಟೆಲ್ ಕಚೇರಿಗೆ ತೆರಳಿ ನಂಬರ್ ಬ್ಲಾಕ್ ಮಾಡುವಂತೆ ದೂರು ನೀಡಿದ್ದರು.

ಆಗಸ್ಟ್ 17ರಂದು ಸಂತ್ರಸ್ತರು ತಮ್ಮ ಐಡಿಎಫ್‌ಸಿ (IDFC) ಬ್ಯಾಂಕ್‌ಗೆ ತೆರಳಿದಾಗ ಖಾತೆಯಲ್ಲಿ ಅನುಮಾನಾಸ್ಪದ ಆನ್‌ಲೈನ್ ವಹಿವಾಟುಗಳು ನಡೆದಿರುವುದು ಪತ್ತೆಯಾಗಿದೆ. ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಸೈಬರ್ ಖದೀಮರು ನೆಟ್ ಬ್ಯಾಂಕಿಂಗ್ ಮೂಲಕ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿರುವುದು ಸ್ಪಷ್ಟವಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ವೃದ್ಧರು ತಮ್ಮ ಇತರ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಎಲ್ಲಾ ಖಾತೆಗಳಲ್ಲಿದ್ದ ಹಣವೂ ಖಾಲಿಯಾಗಿರುವುದು ತಿಳಿದುಬಂದಿದೆ.

ಜುಲೈ 16 ರಿಂದ ಆಗಸ್ಟ್ 18ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2,12,95,500 ಹಣವನ್ನು ವಂಚಕರು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಸಿಮ್ ಕಾರ್ಡ್ ಪೋರ್ಟ್ ಆಗಿದ್ದರಿಂದ ಹಣ ವರ್ಗಾವಣೆಯಾಗುವ ಸಂದರ್ಭದಲ್ಲಿ ಬ್ಯಾಂಕ್‌ನಿಂದ ಯಾವುದೇ ಎಸ್‌ಎಂಎಸ್ (SMS) ಆಲರ್ಟ್ ಅಥವಾ ಕರೆಗಳು ಸಂತ್ರಸ್ತರಿಗೆ ತಲುಪಿಲ್ಲ.

ಸಂತ್ರಸ್ತ ವೃದ್ಧರಿಗೆ ‘ಹೇಮಂತ್’ ಎಂಬ ಅಪರಿಚಿತ ವ್ಯಕ್ತಿ (ಮೊಬೈಲ್ ನಂಬರ್: 7827590552) ನಿರಂತರ ಕರೆ ಮಾಡುತ್ತಿದ್ದು, ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲೂ ಅದೇ ಹೆಸರಿನ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಸಿಮ್ ಅಕ್ಸೆಸ್ ಪಡೆದು ಆನ್‌ಲೈನ್ ಮೂಲಕ ಈ ಸಂಘಟಿತ ಸೈಬರ್ ಅಪರಾಧ ಎಸಗಿರುವ ವಂಚಕರ ವಿರುದ್ಧ ಮಂಗಳೂರಿನ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ పరిಗಣಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!