Wednesday, October 7, 2026
Homeಆರಾಧನಾಶ್ರೀ ಕ್ಷೇತ್ರ ಓಡದಕರಿಯಲ್ಲಿ ಅ.11ರಿಂದ ನವರಾತ್ರಿ ಪೂಜಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಓಡದಕರಿಯಲ್ಲಿ ಅ.11ರಿಂದ ನವರಾತ್ರಿ ಪೂಜಾ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡದಕರಿಯಲ್ಲಿ ದಿವಂಗತ ಬಿ. ಚಂದ್ರಶೇಖರ ಧರ್ಮದರ್ಶಿಗಳ ದಿವ್ಯ ಸ್ಮರಣಾರ್ಥ ವರ್ಷಂಪ್ರತಿ ನಡೆಯುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ನವರಾತ್ರಿ ಪೂಜಾ ಕಾರ್ಯಕ್ರಮವು ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನವರಾತ್ರಿ ಉತ್ಸವದ ಪುಣ್ಯ ಕೈಂಕರ್ಯದಲ್ಲಿ ಭಕ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸ್ವಯಂಸೇವಕರು, ಊರಿನ ಹಾಗೂ ಪರವೂರಿನ ಹತ್ತು ಸಮಸ್ತರು, ಶ್ರೀ ಕ್ಷೇತ್ರ ಓಡದಕರಿಯ ಹಾಗೂ ಶ್ರೀ ಎಸ್. ಗೋಪಾಲಕೃಷ್ಣ ಉಪಾಧ್ಯಾಯ ಅಸ್ರಣ್ಣರು, ಇಂದಬೆಟ್ಟು-ಕುತೊಟ್ಟು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮಗಳ ವಿವರಗಳು; ಅ.11, ಭಾನುವಾರ: ಬೆಳಿಗ್ಗೆ 9ಕ್ಕೆ ತೋರಣ ಮುಹೂರ್ತ, ಪುಣ್ಯಾಹ, ಗಣಹೋಮ, ಪಂಚಾಮೃತ ಅಭಿಷೇಕ ಹಾಗೂ ತೆನೆ ಮುಹೂರ್ತ ನಡೆಯಲಿದೆ. ಬೆಳಿಗ್ಗೆ 11ರಿಂದ ಉಜಿರೆಯ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7ರಿಂದ ನಡ ಕನ್ಯಾಡಿಯ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಅ.12, ಸೋಮವಾರ: ರಾತ್ರಿ 7ರಿಂದ ಕನ್ಯಾಡಿಯ ಶ್ರೀ ಮಕರ ಜ್ಯೋತಿ ಮಕ್ಕಳ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.13, ಮಂಗಳವಾರ: ರಾತ್ರಿ 7ರಿಂದ ಮಾಲಾಡಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.14, ಬುಧವಾರ: ರಾತ್ರಿ 7ರಿಂದ ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.15, ಗುರುವಾರ: ಬೆಳಿಗ್ಗೆ 8.30ರಿಂದ ನವಕ ಪ್ರಧಾನ ಹೋಮ, ಕಲಶಾಭಿಷೇಕ ಹಾಗೂ ನಾಗಬ್ರಹ್ಮ ಸಾನಿಧ್ಯದಲ್ಲಿ ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅಮ್ಮನವರಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7ರಿಂದ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಅ.16, ಶುಕ್ರವಾರ: ಸಂಜೆ 7ರಿಂದ ಓಂಕಾರೇಶ್ವರ ಭಜನಾ ಮಂಡಳಿ ಶ್ರೀ ಕ್ಷೇತ್ರ ಪಜಿರಡ್ಕ, ಇವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.17, ಶನಿವಾರ: ರಾತ್ರಿ 7ರಿಂದ ಕನ್ನಾಜೆಯ ಶ್ರೀ ದುರ್ಗಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.18, ಭಾನುವಾರ: ರಾತ್ರಿ 7ರಿಂದ ಉಜಿರೆಯ ವಿವೇಕಾನಂದ ನಗರದ ಶ್ರೀ ಸರಸ್ವತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.19, ಸೋಮವಾರ: ರಾತ್ರಿ 7ರಿಂದ ಸವಣಾಲಿನ ಫಲ್ಗುಣಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.20, ಮಂಗಳವಾರ: ರಾತ್ರಿ 7ರಿಂದ ತೋಟದಪ ನಾಲ್ಕೂರಿನ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.

ಅ.21, ಬುಧವಾರ: ಬೆಳಿಗ್ಗೆ 8ರಿಂದ ಪಂಚಾಮೃತ ಅಭಿಷೇಕ, ನಾಗ-ನಾಗಬ್ರಹ್ಮ ಸಾನಿಧ್ಯದಲ್ಲಿ ನಾಗತಂಬಿಲ, ಅಶ್ವತ್ಥನಾರಾಯಣ ಪೂಜೆ ಹಾಗೂ ಪರಿವಾರ ದೈವಗಳಿಗೆ ಪರ್ವ ನಡೆಯಲಿದೆ. ಬೆಳಿಗ್ಗೆ 11ರಿಂದ ಹಳೆಕೋಟೆ, ಬೆಳ್ತಂಗಡಿಯ ಭಗವಾನ್ ಶಿರಡಿ ಸಾಯಿ ಸತ್ಯಸಾಯಿ ಸೇವಾಕ್ಷೇತ್ರದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6ರಿಂದ ಲ್ಯಾಲದ ಶ್ರೀ ಬಲಮುರಿ ಗಣಪತಿ ಮಹಿಳಾ ಭಜನಾ ಮಂಡಳಿಯಿಂದ ಹಾಗೂ ರಾತ್ರಿ 7ರಿಂದ ಶ್ರೀ ಬಲಮುರಿ ಗಣಪತಿ ಮಕ್ಕಳ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 3ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Latest News

error: Content is protected !!