Wednesday, October 7, 2026
Homeಕರಾವಳಿಸಿಡಿಲು ಬಡಿದು 30 ವರ್ಷದ ವ್ಯಕ್ತಿ ಸಾವು

ಸಿಡಿಲು ಬಡಿದು 30 ವರ್ಷದ ವ್ಯಕ್ತಿ ಸಾವು

- Advertisement -
- Advertisement -

ಕಾಸರಗೋಡು: ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಬಳಿಯ ಪಾಂಡಿ ಬಳವಂತಡ್ಕದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು 30 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಕುಂಟಾರು ಉಯಿತ್ತಡ್ಕದ ಮಾಯಿಲಾಂಕೋಟ ನಿವಾಸಿ ಮುಹಮ್ಮದ್ ನೌಫಲ್ (30) ಎಂದು ಗುರುತಿಸಲಾಗಿದೆ. ಪತ್ನಿಯ ಮನೆಗೆ ತೆರಳಿದ್ದ ವೇಳೆ ಸಿಡಿಲು ಬಡಿದಿದ್ದು, ತಕ್ಷಣ ಅವರನ್ನು ಮುಳ್ಳಿಯೇರಿಯ ಸಹಕಾರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಿರುವನಂತಪುರದ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಫಲ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆ ಕುರಿತು ಅದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!