Thursday, June 4, 2026
Homeಅಪರಾಧವಿಟ್ಲ: ಅಕ್ರಮವಾಗಿ ಇರಿಸಿದ್ದ ಸ್ಫೋಟಕ ವಸ್ತುಗಳು ಪೊಲೀಸರ ವಶಕ್ಕೆ

ವಿಟ್ಲ: ಅಕ್ರಮವಾಗಿ ಇರಿಸಿದ್ದ ಸ್ಫೋಟಕ ವಸ್ತುಗಳು ಪೊಲೀಸರ ವಶಕ್ಕೆ

- Advertisement -
- Advertisement -

ವಿಟ್ಲ: ಕಲ್ಲಿನ ಕೊರೆಯ ವಠಾರದಲ್ಲಿ ಇರಿಸಿದ್ದ ಅಕ್ರಮ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ನಡೆದಿದೆ.


ವಿಟ್ಲ ಪೊಲೀಸರು ರೌಂಡ್ಸ್‌ ನಲ್ಲಿದ್ದವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸ್ಪೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.ಒಂದು ಖಾಲಿ ಮನೆಯ ಬಳಿಯ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ಫೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಟ್ಟಿರುವುದು ಬೆಳಕಿಗೆ ಬಂದಿತ್ತು.


ಇದೀಗ ಅವುಗಳನ್ನು ಪೊಲೀಸರು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!