Thursday, June 4, 2026
Homeಕರಾವಳಿಉಡುಪಿಕುಂದಾಪುರ: ಉತ್ತಮ ಮಳೆಗಾಗಿ ಶ್ರೀ ಗುರುನರಸಿಂಹ ದೇವಳದಲ್ಲಿ ಸಿಯಾಳಾಭಿಷೇಕ

ಕುಂದಾಪುರ: ಉತ್ತಮ ಮಳೆಗಾಗಿ ಶ್ರೀ ಗುರುನರಸಿಂಹ ದೇವಳದಲ್ಲಿ ಸಿಯಾಳಾಭಿಷೇಕ

- Advertisement -
- Advertisement -

ಕುಂದಾಪುರ: ಮುಂಗಾರು ಪ್ರವೇಶ ಇನ್ನೂ ಆಗಿಲ್ಲ. ಇದ್ರಿಂದ ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆಯಾಗದೇ ಕೃಷಿ ಚಟುವಟಿಕೆಗಳನ್ನೂ ನಡೆಸೋ ಹಾಗಿಲ್ಲ. ಹಾಗಾಗಿ ಜನ ಎಲ್ಲೆಡೆ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಇಂದು ಉಡುಪಿ ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದಲ್ಲಿ  ಉತ್ತಮ ಮಳೆ ಬೆಳೆ ಹಾಗೂ ಲೋಕಕಲ್ಯಾಣಾರ್ಥ ಸಿಯಾಳಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಶ್ರೀ ಗುರುನರಸಿಂಹ, ಅಂಜನೇಯ ಹಾಗೂ ಪರಿವಾರ ದೇವತೆಗಳಿಗೆ ಸೀಯಾಳ ಅಭಿಷೇಕವನ್ನು ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ನೇತೃತ್ವದಲ್ಲಿ ನೆರವೇರಿಸಲಾಯಿತು. ಹಲವು ಭಕ್ತರು ಈ ಸಂದರ್ಭ ಉಪಸ್ಥಿತರಿದ್ರು.

- Advertisement -

Latest News

error: Content is protected !!