Tuesday, May 7, 2024
Homeತಾಜಾ ಸುದ್ದಿಇಲಿಯ ವಶದಲ್ಲಿತ್ತು ಚಿನ್ನಾಭರಣದ ಚೀಲ! ಕೊನೆಗೂ ಮಹಿಳೆಯ ಕೈ ಸೇರಿತು ಗಟಾರದಲ್ಲಿದ್ದ 5 ಲಕ್ಷ ಮೌಲ್ಯದ...

ಇಲಿಯ ವಶದಲ್ಲಿತ್ತು ಚಿನ್ನಾಭರಣದ ಚೀಲ! ಕೊನೆಗೂ ಮಹಿಳೆಯ ಕೈ ಸೇರಿತು ಗಟಾರದಲ್ಲಿದ್ದ 5 ಲಕ್ಷ ಮೌಲ್ಯದ ಚಿನ್ನ

spot_img
- Advertisement -
- Advertisement -

ದುಬಾರಿ ಬೆಲೆಯ ಚಿನ್ನ ಕಳೆದುಹೋದರೆ ಜೀವವೇ ಹೋದಂತಾಗುತ್ತದೆ. ಕಳ್ಳತನವಾದ ಚಿನ್ನ ಮರಳಿ ಸಿಗುವುದು ಅದೃಷ್ಟದ ಮಾತು. ಇನ್ನು ಬೇರೆ ಎಲ್ಲಾದರೂ ಆಭರಣ ಕಳೆದುಕೊಂಡರೆ ಮುಗಿಯಿತು. ಅದು ಸಿಗುವುದು ಕನಸೇ ಸರಿ. ಆದರೆ ವಿಚಿತ್ರ ಪ್ರಕರಣವೊಂದರಲ್ಲಿ ಪೊಲೀಸರು ಗಟಾರದಲ್ಲಿದ್ದ ಇಲಿಗಳಿಂದ ಸುಮಾರು 5 ಲಕ್ಷ ರೂ ಮೌಲ್ಯದ ಚಿನ್ನವನ್ನು ‘ವಶ’ಪಡಿಸಿಕೊಂಡಿದ್ದಾರೆ

ಮಹಾರಾಷ್ಟ್ರ ರಾಜಧಾನಿ ಮುಂಬಯಿಯ ಗೋಕುಲಧಾಮ ಕಾಲೋನಿ ಸಮೀಪ ಈ ಘಟನೆ ನಡೆದಿದೆ. 5 ಲಕ್ಷ ರೂ ಮೌಲ್ಯದ 10 ತೊಲ ಬಂಗಾರವಿದ್ದ ಚೀಲವನ್ನು ಚರಂಡಿಯೊಳಗಿದ್ದ ಇಲಿಗಳ ಬಿಗಿ ಹಿಡಿತದಿಂದ ತೆಗೆಯಲಾಗಿದೆ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಚಂದ್ರಕಾಂತ್ ಘಾರ್ಗೆ ತಿಳಿಸಿದ್ದಾರೆ.

ಕಸದ ರಾಶಿಯೊಂದರಿಂದ ಇಲಿಗಳು ಚೀಲವನ್ನು ಗಟಾರದ ಒಳಗೆ ಎಳೆದುಕೊಂಡು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಕುಲಧಾಮ ಕಾಲೋನಿಯ ಗೋರೆಗಾಂವ್ ಪ್ರದೇಶದಲ್ಲಿ ಮನೆಗೆಲಸ ಮಾಡುತ್ತಿರುವ 45 ವರ್ಷದ ಸುಂದರಿ ಪ್ಲಾನಿಬೆಲ್ ಎಂಬಾಕೆ ಚಿನ್ನವನ್ನು ಬ್ಯಾಂಕ್‌ನಲ್ಲಿ ಇರಿಸಲು ತೆರಳಿದ್ದರು. ಅವರ ಕೈಯಲ್ಲಿ ಎರಡು ಬ್ಯಾಗ್‌ಗಳಿದ್ದವು. ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಮಕ್ಕಳಿಗೆ ವಡಪಾವ್ ತಿನ್ನುವಂತೆ ಒಂದು ಚೀಲ ನೀಡಿದ್ದರು. ಬ್ಯಾಂಕ್‌ಗೆ ತಲುಪಿ ಪರಿಶೀಲಿಸಿದ ಬಳಿಕವಷ್ಟೇ ಅವರಿಗೆ ಗೊತ್ತಾದದ್ದು, ತಾವು ಮಕ್ಕಳಿಗೆ ವಡಾಪಾವ್ ತಿನ್ನಲು ನೀಡಿದ್ದ ಚೀಲದಲ್ಲಿಯೇ ಚಿನ್ನಾಭರಣ ಕೂಡ ಇತ್ತು ಎಂದು ಕೂಡಲೇ ಅವರು ಆ ಜಾಗಕ್ಕೆ ಓಡೋಡಿ ಸಾಗಿದ್ದರು. ಆದರೆ ಅಲ್ಲಿ ಮಕ್ಕಳು ಇರಲಿಲ್ಲ. ಹುಡುಕಿ ಹುಡುಕಿ ಸುಸ್ತಾದ ಆಕೆ, ಕೊನೆಗೆ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ದಿಂಡೋಶಿ ಪೊಲೀಸ್ ಮುಖ್ಯಸ್ಥ ಸೂರಜ್ ರಾವತ್ ಅವರ ತಂಡ, ತನಿಖೆ ಆರಂಭಿಸಿತ್ತು. ಈ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಅವರು ಪರಿಶೀಲನೆ ನಡೆಸಿದರು. ಮಕ್ಕಳು ಮತ್ತು ಅವರ ತಾಯಿಯನ್ನು ಪತ್ತೆ ಮಾಡಿದ್ದರು. ಕಾನ್‌ಸ್ಟೇಬಲ್‌ಗಳು ಆ ಮಹಿಳೆಯನ್ನು ಪ್ರಶ್ನಿಸಿದಾಗ, ಆಕೆ ವಡಾಪಾವ್ ಒಣಗಿ ಹೋಗಿದ್ದರಿಂದ ತಿನ್ನಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದನ್ನು ಅಲ್ಲಿದ್ದ ಕಸದ ರಾಶಿಗೆ ಎಸೆದಿದ್ದಾಗಿ ತಿಳಿಸಿದ್ದರು.

ಕಸದ ರಾಶಿ ಸಮೀಪದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಆಗ ಕೆಲವು ಇಲಿಗಳು ಚೀಲವನ್ನು ಸಮೀಪದ ಗಟಾರಕ್ಕೆ ಎಳೆದುಕೊಂಡು ಹೋಗುತ್ತಿರುವುದು ಕಂಡಿತ್ತು. ಬಳಿಕ ಗಟಾರದಲ್ಲಿ ಹುಡುಕಾಡಿದ ಅವರಿಗೆ ಕಳೆದುಹೋಗಿದ್ದ ಚಿನ್ನ ವಾಪಸ್ ಸಿಕ್ಕಿದೆ.

- Advertisement -
spot_img

Latest News

error: Content is protected !!