Monday, June 29, 2026
Homeತಾಜಾ ಸುದ್ದಿಕೊರೊನಾ ಟೆಸ್ಟ್ ಗೆ ಒಪ್ಪದಿದ್ದರೆ ಇನ್ನು ಜೈಲು ಶಿಕ್ಷೆ ಗ್ಯಾರಂಟಿ

ಕೊರೊನಾ ಟೆಸ್ಟ್ ಗೆ ಒಪ್ಪದಿದ್ದರೆ ಇನ್ನು ಜೈಲು ಶಿಕ್ಷೆ ಗ್ಯಾರಂಟಿ

- Advertisement -
- Advertisement -

ಬೆಂಗಳೂರು : ಕೊರೊನಾದಿಂದಾಗಿ ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ಜನ ಮಾತ್ರ ಬುದ್ಧಿ ಕಲ್ತಿಲ್ಲ. ಬೇಕಾಬಿಟ್ಟಿ ಓಡಾಡುತ್ತಲೇ ಇದ್ದಾರೆ. ಜನ ಅಂತೂ ಬುದ್ಧಿ ಕಲಿಯಲ್ಲ ಹಾಗಾಗಿ ನಾವಾದ್ರೂ ಬುದ್ಧಿ ಕಲಿಸೋಣ ಅಂತಾ ಇದೀಗ ರಾಜ್ಯ ಸರ್ಕಾರವೇ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ..
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಇದಕ್ಕೆ ಬ್ರೇಕ್ ಹಾಕೋದಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮಾರ್ಗಸೂಚಿಯಲ್ಲಿ ಒಂದಷ್ಟು ನಿಯಮಗಳನ್ನು ವಿಧಿಸಿದೆ..
ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹೇಗಿದೆ?
ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರು ಟೆಸ್ಟ್ ಕಡ್ಡಾಯ
ರೋಗದ ಲಕ್ಷಣಗಳು ILI, SARI ಕಂಡು ಬಂದರು ಟೆಸ್ಟ್ ಮಾಡಿಸಲೇಬೇಕು
ಟೆಸ್ಟ್ ಮಾಡಿಸಲು ಒಪ್ಪದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ
50 ಸಾವಿರ ದಂಡ ಹಾಗು 3 ವರ್ಷದ ವರೆಗೆ ಜೈಲು ಸಾಧ್ಯತೆ.

ಈ ಎಲ್ಲಾ ನಿಯಮಗಳನ್ನು ತನ್ನ ಮಾರ್ಗಸೂಚಿಯಲ್ಲಿ ಸರ್ಕಾರ ತಿಳಿಸಿದೆ. ಇನ್ನೂ ಕೂಡ ಕೊರೊನಾವನ್ನು ಸೀರಿಯಸ್ ಆಗಿ ತಗೊಂಡಿಲ್ಲ ಅಂದ್ರೆ ಜೈಲು ಸೇರೋದು ಪಕ್ಕಾ..

- Advertisement -

Latest News

error: Content is protected !!