Monday, June 29, 2026
Homeತಾಜಾ ಸುದ್ದಿಮೊಣಕೈಯಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರ ಬಿಡಿಸಿದ ಅಭಿಮಾನಿ, ಫ್ಯಾನ್ ಪ್ರೀತಿಗೆ ಅಪ್ಪು ಕ್ಲೀನ್ ಬೌಲ್ಡ್

ಮೊಣಕೈಯಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರ ಬಿಡಿಸಿದ ಅಭಿಮಾನಿ, ಫ್ಯಾನ್ ಪ್ರೀತಿಗೆ ಅಪ್ಪು ಕ್ಲೀನ್ ಬೌಲ್ಡ್

- Advertisement -
- Advertisement -

ಬೆಂಗಳೂರು: ತಮ್ಮ ನೆಚ್ಚಿನ ನಟಿಯರಿಗಾಗಿ ಫ್ಯಾನ್ಸ್ ಏನ್ ಬೇಕಾದ್ರೂ ಮಾಡೋದಕ್ಕೆ ರೆಡಿ ಇರ್ತಾರೆ. ಅಲ್ಲದೇ ಬೇರೆ ಬೇರೆ ರೀತಿಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇಲ್ಲೊಬ್ಬ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ ಅಪ್ಪುವಿಗೆ ಸ್ಪೆಶಲ್ ಗಿಫ್ಟ್ ಕೊಟ್ಟಿದ್ದಾನೆ.

ಹೌದು… ಕೇವಲ ತನ್ನ ಮೊಣಕೈ ಬಳಸಿಕೊಂಡು ಅಭಿಮಾನಿ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ಬಿಡಿಸಿದ್ದಾನೆ. ಆತನ ಪ್ರೀತಿ ಹಾಗೂ ಟ್ಯಾಲೆಂಟ್ ನೋಡಿ ಪುನೀತ್ ರಾಜ್ ಕುಮಾರ್ ಫಿದಾ ಆಗಿದ್ದಾರೆ. ಅಲ್ಲದೇ ಪ್ರೀತಿಯಿಂದ ಆ ಚಿತ್ರವನ್ನು ಹಾಗೇ ಆತ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಅಲ್ಲದೇ ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!