- Advertisement -
![]()
- Advertisement -
ಡೆಹ್ರಾಡೂನ್: ಹೆಣ್ಣು-ಗಂಡುಗಳು ಹೊಂದಿಕೊಂಡು ಬಾಳ್ವೆ ನಡೆಸುವುದೇ ಕಷ್ಟ ಎನ್ನುವ ಕಾಲದಲ್ಲಿ ಒಬ್ಬಾಕೆ ಐವರನ್ನು ಮದುವೆಯಾದರೆ? ಹೌದು ಈ ಯುವತಿ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಐವರನ್ನು ಮದುವೆಯಾಗಿದ್ದಾಳೆ.ಈ ‘ಆಧುನಿಕ ದ್ರೌಪದಿ’ ರಾಜೋ. ಡೆಹ್ರಾಡೂನ್‌ನವಳು, ಸಮೀಪದ ಹಳ್ಳಿಯೊಂದರಲ್ಲಿ ತನ್ನ ಐದು ಮಂದಿ ಪತಿಯರೊಂದಿಗೆ ವಾಸವಾಗಿದ್ದಾಳೆ.
ಐವರು ಗಂಡಂದಿರ ಜತೆ ಈಕೆಯದ್ದು ಸುಖೀ ಸಂಸಾರವಂತೆ. ಎಲ್ಲಾ ಪತಿಯರು ತನ್ನನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ನಾನು ತುಂಬಾ ಅದೃಷ್ಟವಂತೆ ಎಂದು ಆಕೆ ಹೇಳಿದ್ದಾಳೆ.
ಐದು ಮಂದಿ ಗಂಡಂದಿರ ಜತೆಯೂ ನಾನು ಸಮನಾಗಿ ಕಾಲ ಕಳೆಯುತ್ತೇನೆ. ಅದರಿಂದಾಗಿ ಯಾರಿಗೂ ಯಾರ ಬಗ್ಗೆಯೂ ಅಸೂಯೆ ಇಲ್ಲ. ಎಲ್ಲರೂ ಚೆನ್ನಾಗಿ ಒಂದೇ ಮನೆಯಲ್ಲಿ ವಾಸವಿದ್ದೇವೆ ಎನ್ನುತ್ತಾಲೆ ರಾಜೋ.
- Advertisement -


