- Advertisement -
![]()
- Advertisement -
ಉತ್ತರಪ್ರದೇಶ: ಇಲ್ಲಿನ 14 ವರ್ಷದ ಗರ್ಭಿಣಿ, ಬಾಲಕಿಯನ್ನು ತಂದೆ ಹಾಗೂ ಆಕೆಯ ಹಿರಿಯ ಅಣ್ಣ ಜತೆಯಾಗಿ ಸೇರಿಕೊಂಡು ಹತ್ಯೆಗೈದಿರುವ ಘಟನೆ ನಡೆದಿದೆ. ಗರ್ಭಿಣಿಯಾಗಲು ಕಾರಣ ಯಾರು ಎಂಬುದನ್ನು ಹೇಳಲು ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುಲ್ಹಾಪುರ್ ಗ್ರಾದ ಸಿಧೌಲಿ ಪ್ರದೇಶದಲ್ಲಿ ತಲೆಕಡಿಯಲ್ಪಟ್ಟಿದ್ದ ಬಾಲಕಿಯ ಶವ ಪತ್ತೆಯಾಗಿದ್ದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಅಲ್ಲದೇ ಇದೊಂದು ಮರ್ಯಾದಾ ಹತ್ಯೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಬಾಲಕಿಯ ತಂದೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
- Advertisement -


