Thursday, May 9, 2024
Homeತಾಜಾ ಸುದ್ದಿಭಾರತದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿಹೊಗಳಿದ ಕಾಂಗ್ರೆಸ್...

ಭಾರತದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿಹೊಗಳಿದ ಕಾಂಗ್ರೆಸ್ ನಾಯಕ..

spot_img
- Advertisement -
- Advertisement -

ನವದೆಹಲಿ: ನಾನು ಇದುವರೆಗೆ ಪಾಕಿಸ್ತಾನವನ್ನು ಕಂಡಿಲ್ಲ, ಅಲ್ಲಿಗೆ ಹೋಗಲಿಲ್ಲ. ಇದು ನನ್ನ ಜೀವನದ ದೊಡ್ಡ ಅದೃಷ್ಟ. ಅಲ್ಲಿಗೆ ಹೋಗದ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎನ್ನಲು ತುಂಬಾ ಸಂತೋಷವಾಗುತ್ತದೆ. ಅದಕ್ಕಿಂತಲೂ ಹೆಚ್ಚು ಸಂತೋಷ ಎಂದರೆ ಹಿಂದುಸ್ಥಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.

ಇಂದು ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿದ್ದು, ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದರು. ಮಾತನಾಡುತ್ತಾ ಗದ್ಗರಿರಾದ ನಬಿ, ‘ನನ್ನನ್ನ ಅತ್ಯಂತ ಬಾವನಾತ್ಮಕವಾಗಿ ಬೀಳ್ಕೊಟ್ಟ ಪ್ರಧಾನಿ ಮೋದಿ ಅವ್ರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಮೋದಿ ಅವರ ಭಾವುಕ ಭಾಷಣದಿಂದ ಎದೆ ತುಂಬಿ ಬಂದಿದೆ’ ಎಂದರು.

ಭಾರತಕ್ಕೆ ನಾನು ಸ್ವಾತಂತ್ರ್ಯ ಸಿಕ್ಕ ಬಳಿಕ ಹುಟ್ಟಿದ್ದೇನೆ. ಅಂದ್ರೆ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಅಲ್ಲಿ ಅಂದ್ರೆ ಪಾಕಿಸ್ತಾನದಲ್ಲಿ ಯಾವ ರೀತಿ ಪರಿಸ್ಥಿತಿ ಅನ್ನೋ ಬಗ್ಗೆ ಓದಿದಾಗ ನಾನೊಬ್ಬ ಹಿಂದೂಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.

ಜೊತೆಗೆ ಬೇರೆ ದೇಶದ ಮುಸಲ್ಮಾನನಿಗೆ ಹಿಂದೂಸ್ತಾನಿ ಮುಸಲ್ಮಾನನ ರೀತಿ ಗೌರವ ಸಿಗಬೇಕು ಎಂದು ಅಭಿಪ್ರಾಯಪಟ್ಟ ಆಜಾದ್, ಅಫ್ಘನಿಸ್ತಾನ, ಇರಾಕ್ ಮುಂತಾದ ಕೆಲ ಮುಸ್ಲಿಂ ದೇಶಗಳಲ್ಲಿ ಬೇರೆ ಧರ್ಮದವರಿಲ್ಲ. ಆದರೂ ಅವರೆಲ್ಲರೂ ಅವರಿಗವರೇ ಹೊಡೆದಾಡಿಕೊಂಡು ದೇಶವೇ ನಾಶವಾಗುತ್ತಿರೋದನ್ನ ನೋಡಿದ್ದೀವಿ. ಕೆಲ ದೇಶಗಳಲ್ಲಿ ಇಂತಹ ಕೆಟ್ಟ ಸಂಸ್ಕøತಿ ಇದೆ. ಅ ಸಂಸ್ಕøತಿ ನಮ್ಮ ದೇಶದಲ್ಲಿ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಗುಲಾಬ್​ ನಬಿ ಅವರು, ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎನ್ನುವುದನ್ನು ತೋರಿಸಿಕೊಟ್ಟವರು ಮೋದಿಯವರು. ಎಷ್ಟೋ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾವಿಬ್ಬರೂ ವಾಗ್ಯುದ್ಧ ಮಾಡಿದ್ದಿದೆ. ಆದರೆ ಅದು ರಾಜಕೀಯ. ಅಲ್ಲಿ ಹಾಗೆಯೇ ಇರಬೇಕು. ಆದರೆ ಮೋದಿಯವರು ಎಂದಿಗೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡೇ ಇಲ್ಲ. ಅವರ ವಿರುದ್ಧ ರಾಜಕೀಯವಾಗಿ ಮಾತನಾಡಿದಾಗಲೂ ಅದು ರಾಜಕೀಯ ಅಷ್ಟೇ ಎಂದು ಅಂದುಕೊಂಡರೇ ವಿನಾ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುವವರು. ಇದು ಒಳ್ಳೆಯ ರಾಜಕಾರಣಿಯ ಗುಣ ಎಂದು ಶ್ಲಾಘಿಸಿದರು.

ಸಹಕಾರದಿಂದ ದೇಶ ನಡೆಯಬೇಕೇ ವಿನಾ ಜಗಳದಿಂದಲ್ಲ. ಜಗಳ ಮಾಡಿ ಸುಖಾ ಸುಮ್ಮನೇ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾ ಕುಳಿತರೆ ದೇಶ ನಡೆಯುವುದಿಲ್ಲ ಎಂದು ಎಲ್ಲರಿಗೂ ಸಲಹೆ ನೀಡಿದರು.

- Advertisement -
spot_img

Latest News

error: Content is protected !!