Saturday, April 27, 2024
Homeತಾಜಾ ಸುದ್ದಿಜನನಾಂಗದ ಫೋಟೋ ಕಳುಹಿಸದಿದ್ರೆ ಕೈ ಕೊಯ್ದುಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ : ಕಾಮುಕನ ಬೆದರಿಕೆಗೆ ಹೆದರಿ ಯಡವಟ್ಟು...

ಜನನಾಂಗದ ಫೋಟೋ ಕಳುಹಿಸದಿದ್ರೆ ಕೈ ಕೊಯ್ದುಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ : ಕಾಮುಕನ ಬೆದರಿಕೆಗೆ ಹೆದರಿ ಯಡವಟ್ಟು ಮಾಡಿಕೊಂಡ ಅಪ್ರಾಪ್ತೆ

spot_img
- Advertisement -
- Advertisement -

ಬೆಂಗಳೂರು: ಜನನಾಂಗದ ಫೋಟೋ ಕಳುಹಿಸದಿದ್ರೆ ಕೈ ಕೊಯ್ದುಕೊಳ್ಳುತ್ತೇನೆ ಎಂಬ ಕಾಮುಕನೊಬ್ಬನ ಬೆದರಿಕೆಗೆ ಹೆದರಿದ ಅಪ್ರಾಪ್ತೆಯೊಬ್ಬಳು ಫೋಟೋ ಶೇರ್​ ಮಾಡಿ ತಂದರೆ ಸಿಲುಕಿದ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.

ಹುಡುಗಿಗೆ ಇನ್ಸ್ಟಾಗ್ರಾಂನಲ್ಲಿ ಕಾರ್ತಿಕ್ ಎಂಬಾತ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದ. ಬಳಿಕ ಫ್ರೆಂಡ್​ಶಿಪ್​ ಹೆಸರಿನಲ್ಲಿ ಕಾಮುಕ ಕಾರ್ತಿಕ್, ಫೋರ್ನ್​ ಫೋಟೋ ಮತ್ತು ವಿಡಿಯೋಗಳನ್ನು ಅಪ್ರಾಪ್ತೆಗೆ ಕಳುಹಿಸುತ್ತಿದ್ದ. ಬಳಿಕ ಆಕೆಯ ಮರ್ಮಾಂಗದ ಫೋಟೋ ಕಳುಹಿಸುವಂತೆ ಕೇಳಿದ್ದ. ಒಂದು ವೇಳೆ ಫೋಟೋ ಕಳುಹಿಸದಿದ್ದರೇ ಕೈ ಕುಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

ಇದೇ ಭಯದಲ್ಲಿ ಅಪ್ರಾಪ್ತೆ ಕಾರ್ತಿಕ್​ಗೆ ಮರ್ಮಾಂಗದ ಫೋಟೋ ಶೇರ್ ಮಾಡಿದ್ದಾಳೆ. ಇದಾದ ಬಳಿಕ ಆಕೆಯ ವರ್ತನೆಯ ಪಾಲಕರಿಗೆ ಅನುಮಾನ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ, ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!