Friday, June 5, 2026
Homeತಾಜಾ ಸುದ್ದಿಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ: ಆದ್ರೂ ನನ್ನನ್ನು ದೇವಸ್ಥಾನದೊಳಗೆ ಸೇರಿಸಲ್ಲ: ಬಹಿರಂಗವಾಗಿಯೇ ಬೇಸರ ಹೊರಹಾಕಿದ ಜಿ.ಪರಮೇಶ್ವರ್

ಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ: ಆದ್ರೂ ನನ್ನನ್ನು ದೇವಸ್ಥಾನದೊಳಗೆ ಸೇರಿಸಲ್ಲ: ಬಹಿರಂಗವಾಗಿಯೇ ಬೇಸರ ಹೊರಹಾಕಿದ ಜಿ.ಪರಮೇಶ್ವರ್

- Advertisement -
- Advertisement -

ತುಮಕೂರು: ಸಚಿವ, ಶಾಸಕ, ಡಿಸಿಎಂ ಆದ್ರೂ ನನನ್ನು ದೇವಸ್ಥಾನದೊಳಗೆ ಸೇರಿಸಲ್ಲ. ನಾನು ದಲಿತ ಎಂಬ ಕಾರಣಕ್ಕೆ ದೇವಾಲಯದ ಒಳಗೆ ಬಿಟ್ಟುಕೊಳ್ಳುವುದಿಲ್ಲ  ಎಂದು‌ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಪಂಚಾಯ್ತಿ ಆವರಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಫಾರಿನ್‌ ಗೂ ಹೋಗಿ ಬಂದಿದ್ದೇನೆ, ನಾನು ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ಆದರೆ ನನಗೆ ದೇವಸ್ಥಾನಕ್ಕೆ ಸೇರಿಸಲ್ಲ. ನಾನು ದೇವಸ್ಥಾನಕ್ಕೆ‌ ಹೋದ್ರೆ ಸ್ವಲ್ಪ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಅಂದು ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ನಾನು ಎಲ್ಲಿ ದೇವಾಲಯದೊಳಗೆ ಬಂದು ಬಿಡ್ತೀನಿ ಅಂತ ಹೀಗೆ ಮಾಡ್ತಾರೆ. ಇಂತಹ ಪರಿಸ್ಥತಿ ಈಗಲೂ ಸಮಾಜದಲ್ಲಿದೆ ಅಂತ ಕಾರ್ಯಕ್ರಮದ ವೇದಿಕೆ ಭಾಷಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!