- Advertisement -
- Advertisement -
ಬೆಳ್ತಂಗಡಿ: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮತ್ತು ಮಾನವೀಯತೆಯ ಮೌಲ್ಯಗಳನ್ನ ಸಾರುವ “ಹುಚ್ಚು ಹಸಿವು” ಎಂಬ ಅತ್ಯುತ್ತಮ ಕಿರುಚಿತ್ರವೊಂದನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿಯ “ಜವನೆರ್ ಪಡಂಗಡಿ” ತಂಡ ಬಿಡುಗಡೆ ಮಾಡಿದೆ.
ಇತ್ತೀಚಿಗೆ ಬಿಡುಗಡೆಯಾದ ರಿಷಭ್ ಶೆಟ್ಟಿ ನಿರ್ದೇಶನದ ಕಥಾಸಂಗಮ ಚಿತ್ರದಿಂದ ಪ್ರೇರಣೆಯಾಗಿ ಪ್ರಜ್ವಲ್ ಬೆಳ್ತಂಗಡಿ ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ.
ಈಗಾಗಲೇ ಜಿಲ್ಲೆಯ ಆನೇಕ ಚಿತ್ರ ಪ್ರೇಮಿಗಳಿಂದ ಈ ಚಿತ್ರಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಸಂತೋಷ್ ನಾಯ್ಕ್ ಪಡಂಗಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮೊಬೈಲ್ ನಲ್ಲಿ 2 ಗಂಟೆಗಳಲ್ಲಿ ಚಿತ್ರೀಕರಿಸಿ, ಎಡಿಟಿಂಗ್ ಅಂದಾಜು 3 ಗಂಟೆಗಳಲ್ಲಿ ಮುಗಿಸಲಾಗಿದೆ.
ಛಾಯಾಗ್ರಹಣವನ್ನು ಸ್ವತಃ ನಿರ್ದೇಶಕ ಪ್ರಜ್ವಲ್ ಬೆಳ್ತಂಗಡಿಯವರೇ ನಿಭಾಯಿಸಿದ್ದು, ಕಥೆ ಮತ್ತು ಮೇಕಪ್ ನ ಜವಾಬ್ದಾರಿಯನ್ನು ಕೀರ್ತನ್ ಶೆಟ್ಟಿ ಪಡಂಗಡಿ ನಿರ್ವಹಿಸಿದ್ದಾರೆ.
- Advertisement -