Monday, May 20, 2024
Homeಕರಾವಳಿಪಾಲ್ಗರ್‌ ನಲ್ಲಿ ಹಿಂದೂ ಸಾಧುಗಳ ಹತ್ಯೆ: ಖಂಡನೆ ವ್ಯಕ್ತ ಪಡಿಸಿದ ಕನ್ಯಾಡಿ ರಾಮಕ್ಷೇತ್ರ ಶ್ರೀಗಳು

ಪಾಲ್ಗರ್‌ ನಲ್ಲಿ ಹಿಂದೂ ಸಾಧುಗಳ ಹತ್ಯೆ: ಖಂಡನೆ ವ್ಯಕ್ತ ಪಡಿಸಿದ ಕನ್ಯಾಡಿ ರಾಮಕ್ಷೇತ್ರ ಶ್ರೀಗಳು

spot_img
- Advertisement -
- Advertisement -

ಕನ್ಯಾಡಿ: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ನಡೆದ ಹಿಂದೂ ಸಾಧುಗಳ ಬರ್ಬರ ಹತ್ಯೆಯನ್ನು ದಕ್ಷಿಣದ ಆಯೋಧ್ಯೆ ಎಂದೇ ಪ್ರಸಿದ್ದಿ ಪಡೆದಿರುವ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತೀವ್ರವಾಗಿ ಖಂಡನೆ ವ್ಯಕ್ತ ಪಡಿಸಿದ್ದಾರೆ.

ಭಾರತದಲ್ಲಿ ಶ್ರೇಷ್ಠವಾದ ಅತೀ ಹೆಚ್ಚು ನಾಗಾ ಸಾಧುಗಳನ್ನು ಹೊಂದಿದ ಅಖಾಡಗಳಲ್ಲಿ ಜುನಾ ಅಖಾಡವೇ ಶ್ರೇಷ್ಠವೆನಿಸಿದೆ ಈ ಅಖಾಡಕ್ಕೆ ಸಂಬಂಧಪಟ್ಟ ಮುಂಬಯಿ ಕಾಂದಿವಲಿಯಲ್ಲಿ ಆಶ್ರಮವನ್ನು ಹೊಂದಿದ ಕಲ್ಪವೃಕ್ಷ ಗಿರಿ ಮಹಾರಾಜರು ಸೂರತ್‌ನಲ್ಲಿದ್ದ ತಮ್ಮ ಅಖಾಡದ ಸಂತರೊಬ್ಬರು ಸಮಾಧಿ ಹೊಂದಿದ ವಿಚಾರ ತಿಳಿದು, ಅಂತಿಮ ಕ್ರಿಯೆಯಲ್ಲಿ ನಡೆಸಲು ಕಾರ್ ಗಾಡಿಯಲ್ಲಿ ಸೂರತ್‌ಗೆ ಹೊರಟಿದ್ದರು. ಲಾಕ್‌ಡೌನ್ ಇದ್ದ ಕಾರಣ, ಮಹಾರಾಷ್ಟ್ರ ಗುಜರಾತ್ ಗಡಿಭಾಗದಿಂದಲೇ ಅವರಿಗೆ ಹಿಂದೆ ಬರಬೇಕಾಯಿತು.

ವಾಪಾಸು ಬರುವಾಗ ಮಹರಾಷ್ಟ್ರದ ಪಾಲ್ಗರ್ ಜಿಲ್ಲೆಯ ಕಾಡಿನ ಮಧ್ಯ ಇರುವ ಮಾರ್ಗದಿಂದ ಬರುವಾಗ ಯಾವುದೇ ಕಾರಣಗಳಿಲ್ಲದೆ ಸುಮಾರು 250 ಮಂದಿ ಇದ್ದ ಜನರ ತಂಡವೊಂದು ಅವರ ಕಾರ್ ಗಾಡಿಯನ್ನು ತಡೆದು ನಿಲ್ಲಿಸಿ, ಮಚ್ಚುಕೊಡಲಿಯಿಂದ ನಿರ್ದಯಿಗಳಂತೆ ಕೊಂದುಹಾಕಿದ್ದಾರೆ. ಇದೊಂದು ಮೃಗೀಯವೂ ಅಲ್ಲ, ಕಾಡುಮನುಷ್ಯರ ಲಕ್ಷಣವೂ ಅಲ್ಲ, ಕಾಡು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಮತ್ತೊಂಡು ಪ್ರಾಣಿಗಳ ಮೇಲೆ ದಾಳಿ ಮಾಡುತ್ತದೆ. ವಿನಾಕಾರಣವಾಗಿ ಯಾವುದೇ ಪ್ರಾಣಿಯನ್ನು ಅದು ಹಿಂಸಿಸುವುದಿಲ್ಲ. ಗುಜರಾತಿನ ನರ್ಮದ ನದಿ ಪರಿಕ್ರಮದ ಕಾಡಿನಲ್ಲಿ ಸಾವಿರಾರು ಕಾಡು ಮನುಷ್ಯರು ಪೇಟೆ ಪಟ್ಟಣ ನೋಡದವರೇ ಆಗಿರುತ್ತಾರೆ. ಆದರೂ ಕೂಡ ಅವರಿಗೆ ಮನುಷ್ಯ ಸಹಜ ಕರುಣೆ ಪ್ರೀತಿ ಇದೆ. ಯಾವುದೇ ಕೇಸರಿ ಬಟ್ಟೆ ಸಾಧುಗಳನ್ನು ಕಂಡರೆ ಊಟ ಉಪಚಾರ ಮಾಡಿಸುತ್ತಾರೆ. ಇವತ್ತು ಭಾರತವನ್ನು ವಿಶ್ವವೇ ದೇವಭೂಮಿ ಎಂದು ಗೌರವಿಸುತ್ತಿದೆ. ಯಾಕೆಂದರೆ ಜಮ್ಮುವಿಂದ ಅಸ್ಸಾಂವರೆಗೆ ಹಿಮಾಲಾಯದ ಅಂಚಿನಲ್ಲಿ ಸಾವಿರಾರು ಸಂತರು ಅನ್ನ ಆಹಾರ ಬಿಟ್ಟು ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ. ಅವರ ತಪಸ್ಸಿನ ಸಿದ್ಧಿಯಿಂದ ಭಾರತ ಸದೃಢವಾದ ಸಂಸ್ಕಾರಯುಕ್ತ ಭಾರತ ಎಂದು ವಿಶ್ವ ಮನ್ನಣೆ ಪಡೆದಿದೆ.

ಇದಕ್ಕೆಲ್ಲ ಕಳಂಕ ತರತಕ್ಕಂತ ಘಟನೆ ಮೊನ್ನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ಸಂತರಾದ ನಮಗೆ ನೋವುತಂದಿದೆ. ಈ ಘಟನೆಯಿಂದ ಧರ್ಮದ ರಕ್ಷಣೆ ಹಾಗೂ ದೇಶದ ರಕ್ಷಣೆ, ಲೋಕಕಲ್ಯಾಣಕ್ಕಾಗಿ ಚಿಂತಿಸುವ ಒಬ್ಬ ಸಂತನಿಗೆ ಸರಕಾರದಿಂದಲೂ ರಕ್ಷಣೆ ಇಲ್ಲ ಎಂದಾದರೆ ಇದು ವಿಧಿಯ ವಿಪರ್‍ಯಾಸವೇ ಸರಿ. ಆದರೆ ಈ ಹಿಂದೆ ಅಗಸ್ಯ ಮಹಾಋಷಿಗಳು ವಾತಾಪಿ ಇಲ್ವಲರ ಕಾಲದಲ್ಲಿ ಇಂತಹಾ ಒಂದು ಸನ್ನಿವೇಷದಲ್ಲಿ ಸಂತರೇ ಸ್ವಯಂ, ದೇಶ, ಧರ್ಮದ ರಕ್ಷಣೆಗಾಗಿ ಶಸ್ತ್ರವಿದ್ಯೆಯನ್ನು ಶಿಷ್ಯರಿಗೆ ಬೋಧಿಸಿದ್ದಾರೆ. ಅದನ್ನೆಲ್ಲ ತಿಳಿದವರು ಜುನಾ ಅಖಾಡದ ಮಿಲಿಟರಿ ಫೋರ್ಸ್ ಎಂದರೆ ತಪ್ಪಾಗಲಾರದು.

ಅಖಾಡದಲ್ಲಿ ಲಕ್ಷಾಂತರ ಶಸ್ತ್ರ ಹಾಗೂ ಶಾಸ್ತ್ರ ವಿದ್ಯೆ ಬಲ್ಲವರಿದ್ದಾರೆ. ಈಗಾಗಲೆ ಅವರ ತೀರ್ಮಾನ ಆಗಿದೆ. ಲಾಕ್‌ಡೌನ್‌ಗೆ ಮೊದಲು ಸರಕಾರ ಜಾಗೃತವಾಗಿ ತಪ್ಪಿತಸ್ಥರನ್ನು ಗಲ್ಲಿಗೇರಿಸಿದರೆ ಒಳಿತು. ಇಲ್ಲವಾದಲ್ಲಿ ಸರಕಾರದ ಯಂತ್ರದಿಂದ ಆಗದ ಕೆಲಸವನ್ನು ನಮ್ಮ ಅಖಾಡವು ಮಾಡಿತೋರಿಸುವುದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಸರಿಯಾದ ಪಾಠ ತಿಳಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ನಾವು ಕರ್ನಾಟಕದ ಎಲ್ಲಾ ಸಾಧು ಸಂತರು ಒಟ್ಟಾಗಿ ಉತ್ತರ ಭಾರತದ ನಾಗ ಸಾಧುಗಳೊಡನೆ ನ್ಯಾಯಕ್ಕಾಗಿ ಕೈಜೋಡಿಸುವ ಅಗತ್ಯತೆ ಇದೆ. ಮುಂದಕ್ಕೆ ಭಾರತದಲ್ಲಿ ಇಂತಹಾ ಘಟನೆ ನಡೆಯದ ರೀತಿಯಲ್ಲಿ ಸಂವಿಧಾನಾತ್ಮಕವಾಗಿ ಎಲ್ಲಾ ರಾಜ್ಯ ಸರಕಾರವನ್ನು ಜಾಗೃತಿಗೊಳಿಸಬೇಕಾದ ಕೆಲಸ ನಮ್ಮಿಂದಾಗಬೇಕಿದೆ. ಈ ಒಂದು ಅಮಾನುಷ ಘಟನೆಯನ್ನು ಖಂಡಿಸುತ್ತೇವೆ, ಅಪರಾಧಿಗಳಿಗೆ ಹಾಗೂ ಅವರೊಂದಿಗಿದ್ದ ಎಲ್ಲಾ ಸಹ ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷಯಾಗಬೇಕೆಂಬುದು ಸರ್ಕಾರದಲ್ಲಿ ಒತ್ತಾಯವಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!