ಬೆಳ್ತಂಗಡಿ: ಲಾಕ್ ಡೌನ್ ನಡುವೆಯೂ ಏಪ್ರಿಲ್ 24 ರಂದು ಬೆಳಿಗ್ಗೆ 7.30 ಗಂಟೆಯ ಸಮಯಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಓಡಿಯಪ್ಪ ಗೌಡ ಇವರು ಖಚಿತ ಮಾಹಿತಿ ಮೇಲೆ ತನ್ನ ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಇಟ್ಟಾಡಿ ಎಂಬಲ್ಲಿರುವ ನಿಸಾರ್ ಎಂಬಾತನು ಮನೆಯ ಸಮೀಪ ತಾತ್ಕಾಲಿಕ ಶೆಡ್ಡಿನಲ್ಲಿ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಸಲುವಾಗಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿರುತ್ತಾರೆ.ಸ್ಥಳದಿಂದ ಸುಮಾರು 15,000/- ರೂಪಾಯಿ ಮೌಲ್ಯದ ಮಾಂಸ, ಮತ್ತು ಇತರ ಅವಯವಗಳು, ಮರದ ತುಂಡು, ಕತ್ತಿ, ಚೂರಿ, ತಕ್ಕಡಿ ಮತ್ತು ತೂಕದ ಬಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಆರೋಪಿ ನಿಸಾರ್ ಮತ್ತು ಇನ್ನಿಬ್ಬರು ಪರಾರಿಯಾಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 5,7, 9, 11 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ: 379 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.