Saturday, June 6, 2026
Homeತಾಜಾ ಸುದ್ದಿಭಾರೀ ಗಾಳಿ ಮಳೆಗೆ ಕುಸಿದ ಮನೆ; ಅವಘಡದಿಂದ ಪಾರಾದ ಮನೆಯವರು

ಭಾರೀ ಗಾಳಿ ಮಳೆಗೆ ಕುಸಿದ ಮನೆ; ಅವಘಡದಿಂದ ಪಾರಾದ ಮನೆಯವರು

- Advertisement -
- Advertisement -

ಚಿಕ್ಕಮಗಳೂರು: ಭಾರೀ ಗಾಳಿಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಮನೆಯೊಂದು ಕುಸಿದಿರುವ ದುರ್ಘಟನೆ ಸಂಭವಿಸಿದೆ.

ರಾಮಮ್ಮ ಹಾಗೂ ಸುಬ್ಬಯ್ಯ ಅವರ ಮನೆಯು ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದೆ. ಇದರ ಪರಿಣಾಮ ನಡೆಯಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ.

ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯು ಕುಸಿದು ಬಿದ್ದಿದ್ದು, ಘಟನಾ ಸಂಬಂಧ ಸರ್ಕಾರವನ್ನು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಮನೆಯವರು ಅತೀ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ ಎನ್ನಲಾಗಿದೆ. ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಪ್ರಮಾಣದ ಹಾನಿಯುಂಟಾಗಿದೆ. ಹಲವೆಡೆ ಗುಡ್ಡ ಕುಸಿತ, ಪ್ರವಾಹ ಎದುರಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

- Advertisement -

Latest News

error: Content is protected !!