Thursday, April 25, 2024
Homeಉದ್ಯಮZoom ಬಳಕೆದಾರರಿಗೆ ಇಲ್ಲಿದೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

Zoom ಬಳಕೆದಾರರಿಗೆ ಇಲ್ಲಿದೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

spot_img
- Advertisement -
- Advertisement -

ನವದೆಹಲಿ : ನೀವು ಕೂಡ Zoom ಮೂಲಕ ವಿಡೀಯೋ ಕಾನ್ಫರೆನ್ಸ್ ಮಾಡುವವರಾಗಿದ್ದರೆ ಇದನ್ನ ತಪ್ಪದೇ ಓದಲೇ ಬೇಕು. ಜನ ಸಾಮನ್ಯರಿಗೆ ಖಾಸಗಿ ವೀಡಿಯೊ ಕಾನ್ಫರೆನ್ಸ್ ಮಾಡಲು Zoom ಸುರಕ್ಷಿತವಾದ ವೇದಿಕೆಯಲ್ಲ ಎಂದು ಸರ್ಕಾರ ಹೇಳಿದೆ.

ಈ ಹಿಂದೆ, CERT-In ತಿಳಿಸಿರುವಂತೆ ಸುರಕ್ಷಿತವಲ್ಲದ ಈ ಡಿಜಿಟಲ್ ಅಪ್ಲಿಕೇಶನ್‌ ಬಳಕೆ ಮಾಡುವುದರಿಂದ ಸೈಬರ್‌ ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ. ಜೊತೆಗೆ ಇದರಿಂದ ಕಚೇರಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಸೋರಿಕೆ ಆಗಿ ಕ್ರಿಮಿನಲ್ ಗಳ ಕೈ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು.

ಇಷ್ಟೊಂದು ಅಭದ್ರತೆಯ ನಡುವೆ ಆಯಪ್ ಬಳಸಲು ಬಯಸುವವರಿಗೆ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು ಈ ರೀತಿಯಾಗಿವೆ..

೧. ಪ್ರತಿ ಬಾರಿ ಮೀಟಿಂಗ್ ಮಾಡುವಾಗ ಹೊಸ ಹೊಸ User ID ಮತ್ತು Password ಬಳಸಿ
೨. Enabling Waiting Room. ಇದರಿಂದ ಮೀಟಿಂಗ್ ನಡೆಸುವ ವ್ಯಕ್ತಿ ಅಡ್ಮಿಟ್ ಮಾಡಿದಾಗ ಮಾತ್ರ ಅವರಿಗೆ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.
೩. ಮೀಟಿಂಗ್ ನಡೆಸುವವರು ಆರಂಭಿಸುವುದಕ್ಕಿಂತ ಮೊದಲು ಜಾಯಿನ್ ಆಗುವುದನ್ನು ತಡೆಯುವುದು.
೪. Screen sharing by host only ಇದನ್ನ ಕ್ಲಿಕ್ ಮಾಡುವುದು.
೫. Allow Remove participants from re joinಇದನ್ನು ಡಿಸೇಬಲ್ ಮಾಡುವುದು.
೬. ಅಗತ್ಯ ಇದ್ದರೆ file transfer ಮಾಡುವ ಆಯ್ಕೆಗಳನ್ನು ತಡೆಯಿರಿ.
೭. ಮೀಟಿಂಗ್ ನಲ್ಲಿ ಭಾಗವಹಿಸಬೇಕಾದವರು ಎಲ್ಲರೂ ಬಂದ ನಂತರ Locking Meeting ಆಯ್ಕೆ ಬಳಸಿ.
೮. ರೆಕಾರ್ಡ್ ಮಾಡುವ ಆಯ್ಕೆಯನ್ನು ತಡೆಹಿಡಿಯಿರಿ.

ನೀವು ಅಡ್ಮಿನ್ ಆಗಿದ್ದರೆ ಮೀಟಿಂಗ್ ನ್ನು ಸರಿಯಾಗಿ ಕೊನೆಗೊಳಿಸಿ, ಸುಮ್ಮನೆ ಎದ್ದು ಹೋಗಬೇಡಿ.

- Advertisement -
spot_img

Latest News

error: Content is protected !!