Wednesday, September 18, 2024
Homeಉದ್ಯಮಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ

ಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ

spot_img
- Advertisement -
- Advertisement -

ಬೆಂಗಳೂರು: ಲಾಕ್ಡೌನ್ ಪರಿಣಾಮ ಮತ್ತು ಬೇಡಿಕೆ ಜಾಸ್ತಿಯಾಗಿರುವುದರಿಂದ ಮಾಂಸ ಹಾಗೂ ಚಿಕನ್ ಬೆಲೆ ಗಗನಕ್ಕೇರಿದೆ.

ಕಳೆದ ತಿಂಗಳು ಹಕ್ಕಿ ಜ್ವರದ ಕಾರಣ ಅನೇಕ ಕಡೆಗಳಲ್ಲಿ ಚಿಕನ್ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಚಿಕನ್ ಗೆ ಬೇಡಿಕೆ ಕುಸಿದಿದ್ದರಿಂದ ಅನೇಕ ಕೋಳಿ ಫಾರಂ ಮಾಲೀಕರು ಸಾವಿರಾರು ಕೋಳಿಗಳನ್ನು ಸಮಾಧಿ ಮಾಡಿದ್ದರು. ಇದರಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರೀ ನಷ್ಟ ಉಂಟಾಗಿತ್ತು. ಇದಾದ ನಂತರದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಚಿಕನ್ ಹಾಗೂ ಮಾಂಸಕ್ಕೆ ಬೇಡಿಕೆ ಜಾಸ್ತಿಯಾಗಿದೆ.

ಲಾಕ್ ಡೌನ್ ನಡುವೆಯೂ ಮಾಂಸ, ಚಿಕನ್ ಅಂಗಡಿಗಳಿಗೆ ಜನ ಮುಗಿಬೀಳುತ್ತಿದ್ದು, ಬೆಲೆ ಕೂಡ ದುಬಾರಿಯಾಗಿದೆ. ಹೀಗೆ ಮಾಂಸ ಮತ್ತು ಚಿಕನ್ ಬೆಲೆ ಜಾಸ್ತಿಯಾಗಿದ್ದರಿಂದ ಬಿಬಿಎಂಪಿಯಿಂದಲೇ ದರ ನಿಗದಿ ಮಾಡಲಾಗಿದೆ.

ಕುರಿ, ಮೇಕೆ, ಕೋಳಿ ಮಾಂಸ ಮಾರಾಟಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ದರ ನಿಗದಿ ಮಾಡಿದ್ದಾರೆ. ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನಲೆ ದರ ನಿಗದಿ ಮಾಡಲಾಗಿದೆ. ಜೀವಂತ ಕೋಳಿ 1 ಕೆಜಿಗೆ 120 ರೂಪಾಯಿ, ಸ್ಕಿನ್ ಔಟ್ ಚಿಕನ್ ಗೆ 180 ರೂ., ವಿತ್ ಸ್ಕಿನ್ ಕೆಜಿಗೆ 160 ರೂಪಾಯಿ ದರ ನಿಗದಿ ಮಾಡಲಾಗಿದೆ. ಅದೇ ರೀತಿ ಕುರಿ, ಮೇಕೆ ಮಾಂಸ ಕೆಜಿಗೆ 700 ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!