ಲಾಕ್ ಡೌನ್ ವಿಶ್ವದ ಜನರನ್ನು ಮನೆಯಲ್ಲಿ ಬಂಧಿಸಿದೆ. ಜನರು ಮನೆಯಿಂದಲೇ ಕೆಲಸ ಮಾಡ್ತಿದ್ದಾರೆ. ಮತ್ತೆ ಕೆಲವರು ಸಮಯ ಕಳೆಯಲು ಆನ್ಲೈನ್ ಮೊರೆ ಹೋಗಿದ್ದಾರೆ. ಆನ್ಲೈನ್ ನಲ್ಲಿ ವಿವಾಹೇತರ ಸಂಬಂಧ ಹೆಚ್ಚಾಗಿದೆ ಎನ್ನಲಾಗ್ತಿದೆ.
ಖಾಲಿ ಸಮಯವನ್ನು ಜನರು ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಬಳಕೆ ಮೂಲಕ ಕಳೆಯುತ್ತಿದ್ದಾರಂತೆ. ಚಂದಾದಾರರ ಸಂಖ್ಯೆ ಶೇಕಡಾ 75ರಷ್ಟು ಹೆಚ್ಚಾಗಿದೆ ಎಂದು ಡೇಟಿಂಗ್ ಅಪ್ಲಿಕೇಷನ್ ಗಳು ಹೇಳಿವೆ. ಜನರು ಆನ್ಲೈನ್ ನಲ್ಲಿ ಸಮಯ ಕಳೆಯುವ ಬದಲು ಕುಟುಂಬಸ್ಥರ ಜೊತೆ ಸಮಯ ಕಳೆಯಿರಿ ಎಂದು ತಜ್ಞರು ಸಲಹೆ ನೀಡ್ತಿದ್ದಾರೆ.
ದಂಪತಿ ಮಧ್ಯೆ ಭಿನ್ನಾಭಿಪ್ರಾಯವಿದ್ರೆ ಸರಿಪಡಿಸಿಕೊಳ್ಳಲು ಇದು ಒಳ್ಳೆಯ ಸಮಯ. ಅಡುಗೆ ಸೇರಿದಂತೆ ಮನೆ ಕೆಲಸವನ್ನು ಇಬ್ಬರು ಸೇರಿ ಮಾಡಿದ್ರೆ ಸಂಬಂಧ ಗಟ್ಟಿಯಾಗಲಿದೆ. ಇಬ್ಬರು ಒಟ್ಟಾಗಿ ಸಿನಿಮಾ ವೀಕ್ಷಣೆ ಮಾಡಬಹುದು. ಇಬ್ಬರು ಸೇರಿ ಪುಸ್ತಕ ಓದಬಹುದು. ಸಂಬಂಧ ಗಟ್ಟಿಗೊಳಿಸಿಕೊಳ್ಳಿ. ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಬಳಸುತ್ತ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.