Friday, August 12, 2022
HomeUncategorizedಶಾಸಕ ಸಂಜೀವ ಮಠಂದೂರು ನೀಡಿದ ಆಹಾರ ಕಿಟ್‌ನಲ್ಲಿ ಚಿನ್ನದ ಉಂಗುರ !

ಶಾಸಕ ಸಂಜೀವ ಮಠಂದೂರು ನೀಡಿದ ಆಹಾರ ಕಿಟ್‌ನಲ್ಲಿ ಚಿನ್ನದ ಉಂಗುರ !

- Advertisement -
- Advertisement -

ಪುತ್ತೂರು, ಎ.16: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಂ ಮೂಲಕ ವಿತರಿಸಲಾದ ಆಹಾರದ ಕಿಟ್‌ನಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಪುತ್ತೂರಿನ ಬಾಲಕನೋರ್ವ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ನಗರ ಹೊರವಲಯದ ಕರ್ಮಲ ನಿವಾಸಿ ಹನೀಫ್ ಎಂಬವರ ಪುತ್ರ ಹುಕಾಸ್ ಎಂಬವನೇ ಈ ಬಾಲಕ.

ಹನೀಫ್‌ರ ಮನೆಗೆ ವಾರದ ಹಿಂದೆ ಶಾಸಕರ ವಾರ್ ರೂಂ ಮುಖಾಂತರ ಪುತ್ತೂರಿನ ಬಂಟರ ಸಂಘದ ವತಿಯಿಂದ ನೀಡಲಾದ ಆಹಾರದ ಕಿಟ್ ನೀಡಲಾಗಿತ್ತು. ಈ ಕಿಟ್ ಪ್ಯಾಕ್ ಮಾಡುವ ಸಂದರ್ಭ ಪ್ಯಾಕ್ ಮಾಡಿದ ವ್ಯಕ್ತಿಯ ಚಿನ್ನದ ಉಂಗುರ ಆಕಸ್ಮಿಕವಾಗಿ ಅದರೊಳಗೆ ಸೇರಿಕೊಂಡಿತ್ತು. ಕಿಟ್ ತೆರೆದ ಸಂದರ್ಭ ಹುಕಾಸ್‌ಗೆ ಉಂಗುರ ಸಿಕ್ಕಿತ್ತು.

ಈ ಬಗ್ಗೆ ಆತ ಸ್ಥಳೀಯ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಅವರ ಮೂಲಕ ಉಂಗುರದ ವಾರಸುದಾರರನ್ನು ಪತ್ತೆ ಹಚ್ಚಲಾಯಿತು. ಅದರಂತೆ ವಾರಸುದಾರರಾದ ರಾಮಚಂದ್ರ ಘಾಟೆಯವರಿಗೆ ಉಂಗುರವನ್ನು ಹಿಂದಿರುಗಿಸಲಾಯಿತು. 12 ವರ್ಷದ ಹುಕಾಸ್‌ನ ಪ್ರಾಮಾಣಿಕತೆ ಅರಿತ ಶಾಸಕ ಸಂಜೀವ ಮಠಂದೂರು ಗುರುವಾರ ಆತನ ನಿವಾಸಕ್ಕೆ ತೆರಳಿ ಆತನಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಆಹಾರ ಕಿಟ್ ವಿತರಿಸಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲ, ರಾಮದಾಸ್ ಹಾರಾಡಿ ಉಪಸ್ಥಿತರಿದ್ದರು.

- Advertisement -
- Advertisment -

Latest News

error: Content is protected !!