Saturday, June 27, 2026
HomeWorldಶ್ರೀರಾಮ ಸಲಿಂಗಕಾಮಿ, ಹನುಮಂತ ಒಬ್ಬ ಬಿರಿಯಾನಿ ಸಪ್ಲೆಯರ್ ಎಂದು ಅವಹೇಳನ - ನೂಪುರ್ ಶರ್ಮಾ ಬಗ್ಗೆ...

ಶ್ರೀರಾಮ ಸಲಿಂಗಕಾಮಿ, ಹನುಮಂತ ಒಬ್ಬ ಬಿರಿಯಾನಿ ಸಪ್ಲೆಯರ್ ಎಂದು ಅವಹೇಳನ – ನೂಪುರ್ ಶರ್ಮಾ ಬಗ್ಗೆ ಆಕ್ರೋಶ ಹೊರಹಾಕಿದ ಕಾಂಗ್ರೆಸ್‌; ಕ್ಲಬ್ ಹೌಸ್ ನಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ

- Advertisement -
- Advertisement -

ನೂಪುರ್ ಶರ್ಮಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೆಸ್ ಕೂಟ ಈಗ ಶ್ರೀರಾಮ, ಸೀತೆ, ಹನುಮಂತನ ಬಗ್ಗೆ ಕೀಳಾಗಿ ಮಾತನಾಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ಲಬ್ ಹೌಸ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಕಾಂಗ್ರೆಸ್ ಐ ಟಿ ಸೆಲ್’ನ ಪುತ್ತೂರಿನ ಶೈಲಜಾ ಅಮರ್ ನಾಥ್ ಧಕ್ಕೆ ಉಂಟುಮಾಡಿದ್ದಾರೆ. ಮತ್ತು ಕೀಳಾಗಿ ರಾಮ ಸೀತೆ ಹನುಮಂತರನ್ನು ಬಿಂಬಿಸಿದ್ದಾರೆ.


ಸದ್ಯ ಕ್ಲಬ್ ಹೌಸ್‌ನಲ್ಲಿ ಗೇಲಿ ಮಾಡಿದ ಆಡಿಯೋ ಸಖತ್ ವೈರಲ್ ಆಗುತ್ತಿದ್ದು ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಅದರಲ್ಲೂ ಮರ್ಯಾದಾ ಪುರುಷೋತ್ತಮನ ರಾಮ ಮತ್ತು ಅವನ ಬಂಟ ಹನುಮಂತನ ಸಂಬಂಧವನ್ನು ಲೈಂಗಿಕ ದೃಷ್ಟಿಯಲ್ಲಿ ಹೋಲಿಸಲಾಗಿದೆ. ಶ್ರೀರಾಮನನ್ನು ಸಲಿಂಗಕಾಮಿ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಸೀತಾ ಮಾತೆಯ ಹುಟ್ಟಿನ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಹನುಮಂತ ಒಬ್ಬ ಬಿರಿಯಾನಿ ಸಪ್ಲೆಯರ್ ಎಂದೂ ಹೇಳಿದ್ದಾರೆ.


ಕಳೆದ ಕೆಲವು ವಾರಗಳಿಂದ ಭಾರತದ ಹಲವು ಕಡೆಗಳಲ್ಲಿ ಉದಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‍ ಶರ್ಮಾ ಪೈಗಂಬರ್ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿ ಮುಸ್ಲಿಂಮರು ಗಲಭೆ ಸೃಷ್ಟಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಬಾಯಿಗೆ ಬಂದ ಹಾಗೆ ಟ್ವಿಟ್ ಮಾಡಿ ಆಕ್ರೋಶ ಹೊರ ಹಾಕಿತ್ತು.


ಹಿಂದೂಗಳು ಬೆಂಕಿ ಹಚ್ಚಬೇಕಾ..? ಅಥವಾ ಕಲ್ಲು ತೂರಬೇಕಾ..? ಪೈಗಂಬರ್ ಬಗ್ಗೆ ನೂಪುರ್‍ ಶರ್ಮಾ ಹೇಳಿದ ಮಾತುಗಳಿಂದ ಆಕ್ರೋಶಗೊಂಡ ಅನೇಕರು ಟ್ವಿಟ್, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರೋದು ಮಾತ್ರವಲ್ಲ ದೇಶಕ್ಕೆ ಬೆಂಕಿ ಇಟ್ಟಿದ್ದಾರೆ. ಈ ಕಿಡಿ ಕಾಶ್ಮೀರದಿಂದ ಕನ್ಯಾಕುಮಾರಿವಗೂ ಧಗಧಗಿಸಿತ್ತು. ಕಲ್ಲು ತೂರಾಟ, ಗಲಭೆ, ಹಿಂಸಾಚಾರಕ್ಕೂ ಕಾರಣವಾಗಿತ್ತು. ಈ ಕಿಚ್ಚು ಇಡೀ ದೇಶಾದ್ಯಂತ ಹೊತ್ತಿಕೊಂಡಿತ್ತು. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾಕಾರರು ಅಟ್ಟಹಾಸ ಮೆರೆದಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಧಗಧಗಿಸ್ತಿದೆ. ಪ್ರತಿಭಟನಾಕಾರರು ಕಲ್ಲು ತೂರಿ ಮತ್ತೆ ಹುಚ್ಚಾಟ ಮೆರೆದಿದ್ದಾರೆ. ಇದೂ ಸಾಲದೆಂಬಂತೆ ಪಶ್ಚಿಮ ಬಂಗಾಳ ಬೆತುಗಾದಹರಿ ರೈಲ್ವೇ ಸ್ಟೇಷನ್‌ಗೆ ನುಗ್ಗಿ ಟ್ರೈನ್‌ವೊಂದನ್ನ ಧ್ವಂಸಗೊಳಿಸಿದ್ದಾರೆ.

- Advertisement -

Latest News

error: Content is protected !!