Sunday, June 7, 2026
HomeUncategorizedಹಿಂದೂ ದೇವರ ಅವಹೇಳನ ಆರೋಪ: ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

ಹಿಂದೂ ದೇವರ ಅವಹೇಳನ ಆರೋಪ: ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

- Advertisement -
- Advertisement -

ಪುತ್ತೂರು: ಹಿಂದೂ ದೇವರ ಅವಹೇಳನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

ಕಾಂಗ್ರೆಸ್ ಐಟಿ ಸೆಲ್ ನ ಕಾರ್ಯದರ್ಶಿ ಶೈಲಜಾ ಅಮರ‌ನಾಥ, ಪ್ರೀತು ಶೆಟ್ಟಿ, ಅನೀಲ್, ಪುನೀತ್ ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ಪ್ರವೀಣ್ ಕುಮಾರ್ ಎಂಬವರು ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ಅವಹೇಳನ ಮಾಡಿರುವ ಆರೋಪ ಮಾಡಲಾಗಿದ್ದು, ಶ್ರೀರಾಮ, ಸೀತೆ, ಹನುಮಂತ ದೇವರನ್ನು ಅಶ್ಲೀಲವಾಗಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹಿಂದೂಗಳ ಧಾರ್ಮಿಕ ನಂಬಿಕೆಗೆ ಭಾವನೆಗೆ ಧಕ್ಕೆ ತಂದಿರುವುದಾಗಿ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ‌.

- Advertisement -

Latest News

error: Content is protected !!