- Advertisement -
- Advertisement -
ಬೆಳ್ಳಾರೆ, ಮೇ.05 : ಇಂದು ಸಂಜೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದೆ.
ಸುಳ್ಯ, ಬೆಳ್ಳಾರೆ, ಸವಣೂರು, ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು.
ಸುಳ್ಯದಲ್ಲಿ ಭೀಕರ ಗಾಳಿ ಮಳೆ ವ್ಯಾಪಕ ಹಾನಿ :
ಅರಂತೋಡು ಭಾಗದಲ್ಲಿ ಸುರಿದ ಗಾಳಿ ಮಳೆಗೆ ಅರಂತೋಡು, ಅಡತಲೆ, ಮರ್ಕಂಜ ರಸ್ತೆ ಸಂಪರ್ಕ ಕಡಿತಗೊಡಿದೆ. ಸುಳ್ಯದಲ್ಲಿ ಸುರಿದ ಗಾಳಿ ಮಳೆಗೆ ವ್ಯಪಾಕ ಹಾನಿ ಉಂಟಾದ ಘಟನೆ ವರದಿಯಾಗಿದೆ. ಕಲ್ಲುಗುಂಡಿ, ಸಂಪಾಜೆ, ತೊಡಿಕಾನ, ಅರಂತೋಡು ಬಾಗದಲ್ಲಿ ಮನೆಗೆ ಹಾಗು ಕೃಷಿ ತೋಟಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
- Advertisement -