Thursday, March 28, 2024
Homeಮಹಾನ್ಯೂಸ್ಮುಂಬೈ ಯಕ್ಷರಂಗದ ದಂತಕತೆ ಎಚ್ ಬಿ ಎಲ್ ರಾವ್ ಇನ್ನಿಲ್ಲ

ಮುಂಬೈ ಯಕ್ಷರಂಗದ ದಂತಕತೆ ಎಚ್ ಬಿ ಎಲ್ ರಾವ್ ಇನ್ನಿಲ್ಲ

spot_img
- Advertisement -
- Advertisement -

ಮುಂಬೈ: ಮಹಾನಗರಿಯ ಹಿರಿಯ ಯಕ್ಷಗಾನ ಪೋಷಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಎಚ್ ಬಿ ಎಲ್ ರಾವ್ ಇಂದು ಬೆಳಿಗ್ಗೆ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ಹೆಜಮಾಡಿ ಮೂಲದ “ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್” ನಾಡಿನ ಜನತೆಗೆ ಎಚ್.ಬಿ.ಎಲ್.ರಾವ್ ಎಂದು ಚಿರಪರಿಚಿತರಾಗಿದ್ದರು.
ಬಿಲ್ಲವರ ಅಸೋಸಿಯೇಷನ್ ಅಯೋಜಿತ ರಾತ್ರಿಶಾಲೆಯಲ್ಲಿ, ಮೊಗವೀರ ಸಂಘದವರ ಫ್ರೀ ನೈಟ್ ಸ್ಕೂಲಿನಲ್ಲಿ, ಬಂಟರ ಸಂಘದ ರಾತ್ರಿಶಾಲೆಯಲ್ಲಿ ೯ ರಿಂದ ೧೧ ನೆಯ ತರಗತಿಯ ಮಕ್ಕಳಿಗೆ ಶಿಕ್ಷಕರಾಗಿ ಸುಮಾರು 15 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

2014 ರಲ್ಲಿ ಎಚ್.ಬಿ.ಎಲ್.ರಾಯರ ಕಾಣಿಕೆಗಳನ್ನು ಗುರುತಿಸಿ ಹೊರತರಲಾದ ‘ಹರಸಾಹಸಿ’ ಎಂಬ ಅಭಿನಂದನಾಗ್ರಂಥ ಮತ್ತು ಕಲಾತಪಸ್ವಿ,( 2012) ಕೃತಿಗಳು ರಾವ್ ರವರ ವ್ಯಕ್ತಿತ್ವಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಹಲವಾರು ಪುಸ್ತಕ, ಪತ್ರಿಕೆಗಳ ಪ್ರಧಾನ ಸಂಪಾದಕ, ಪ್ರಕಾಶಕ, ಕನ್ನಡ ಸಂಘಗಳ ಸಂಘಟಕರಾದ ರಾವ್ ಹಲವಾರು ಯಕ್ಷಗಾನಸಾಹಿತ್ಯ ಸಮ್ಮೇಳನ್ನು ಆಯೋಜಿಸಿ, ನೂರಾರು ಯಕ್ಷಗಾನ ಪ್ರಸಂಗಗಳು ಜನಪ್ರಿಯತೆಯನ್ನು ಗಳಿಸಲು ನೆರವಾಗಿದ್ದರು.

ಮೃತರು ಪತ್ನಿ, ಮಗಳು, ಅಳಿಯ ಮತ್ತು ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

ಇವರಿಗೆ ಸಂದಿರುವ ಪ್ರಶಸ್ತಿಗಳು

  • ಭಾಗವತ ಸಾಹಿತ್ಯ ಪ್ರಶಸ್ತಿ
  • ಕುಬೆವೂರು ಪುಟ್ಟಣ್ಣಶೆಟ್ಟಿ ಪ್ರಶಸ್ತಿ
  • ವಿಶ್ವೇಶ್ವರಯ್ಯ ಪ್ರಶಸ್ತಿ,
  • ಕರ್ನಾಟಕ ಶ್ರೀ,
  • ಜ್ಞಾನವಿಜ್ಞಾನ,ಪೂಲ್ಯ ದೇಜಪ್ಪಶೆಟ್ಟಿಯಕ್ಷಗಾನ ಸಾಹಿತ್ಯ ಪ್ರಶಸ್ತಿ,
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
  • ಸಮಾಜರತ್ನ ಪ್ರಶಸ್ತಿ,
  • ಯಕ್ಷಗಾನ ಕಲಾ ಪ್ರಶಸ್ತಿ,
  • ತುಳುಶ್ರೀಪ್ರಶಸ್ತಿ,ಸಾಧನ ಶಿಖರ ಪ್ರಶಸ್ತಿ,
  • ಮುಂಬಯಿ ವಿಶ್ವವಿದ್ಯಾಲಯದ ಗೌರವ ಪುರಸ್ಕಾರ

ಮುಂಬೈ: ಹಿರಿಯ ಯಕ್ಷಗಾನ ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ ವಿಧಿವಶ

ಕಲ್ಯಾಣ್: ಸಂಕಷ್ಟದಲ್ಲಿರುವ ಹೋಟೆಲ್ ಕಾರ್ಮಿಕರಿಗೆ ಕಿಟ್ ವಿತರಿಸಿದ ಶಿವಸೇನೆ ದಕ್ಷಿಣ ಭಾರತೀಯ ಘಟಕ

- Advertisement -
spot_img

Latest News

error: Content is protected !!