Thursday, April 18, 2024
Homeತಾಜಾ ಸುದ್ದಿಮುಂಬೈ: ಹಿರಿಯ ಯಕ್ಷಗಾನ ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ ವಿಧಿವಶ

ಮುಂಬೈ: ಹಿರಿಯ ಯಕ್ಷಗಾನ ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ ವಿಧಿವಶ

spot_img
- Advertisement -
- Advertisement -

ಮುಂಬೈ ಮಾ23 : ಘಾಟ್ಕೋಪರ್ ಅಸಲ್ಫದಲ್ಲಿರುವ ಶ್ರೀ ಗೀತಾ೦ಬಿಕ ಕ್ಷೇತ್ರದಲ್ಲಿ ಐವತ್ತು ನಾಲ್ಕು ವರ್ಷಗಳ ಹಿಂದೆ ಶ್ರೀ ಗೀತಾಬಿಂಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿರುವ ಸಂಜೀವ ಕಾಂಚನ್ ರವರು ಮಾರ್ಚ್ 23ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಂಜೀವ ಕಾಂಚನ್ ತವರೂರಿನ ಯಕ್ಷಗಾನ, ನಾಟಕಗಳನ್ನು ಮಹಾನಗರಕ್ಕೆ ಬರ ಮಾಡಿಸಿ ಇಲ್ಲಿಯ ಉಪನಗರಗಳ ಮತ್ತು ಪುಣೆ, ನಾಸಿಕ್, ಬರೋಡ ಮತ್ತಿತರ ಕಡೆಗಳಲ್ಲಿ ನಾಟಕ ಯಕ್ಷಗಾನಗಳನ್ನು ಪ್ರದರ್ಶಿಸಿ ಯಶಸ್ವಿ ಸಂಘಟಕರು ಸಂಚಾಲಕರಾಗಿ ಗುರುತಿಸಿಕೊಂಡವರು ಇವರು ಮಂಗಳೂರಿನ ಕಲಾ ಸಂಗಮ ತಂಡವನ್ನು. ಕಿನ್ನಿಗೋಳಿಯ ಕಲಾವಿದರ ತಂಡವನ್ನು .ಹಾಗೂ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ತಂಡಗಳನ್ನು ನಗರಕ್ಕೆ ಕರೆತರುವುದರಲ್ಲಿ ಅಪಾರ ಶ್ರಮ ವಹಿಸಿದವರು.
ಇವರ ಸಂಘಟನಾ ಚತುರತೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಬಿರುದು ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಿದೆ. ಸಂಜೀವ ಕಾಂಚನ್ ಅವರ ನಿಧಾನಕ್ಕೆ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ . ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ .ಹಿರಿಯ ಭಾಗವತರಾದ ಪುಣ್ಯ ಲಕ್ಷ್ಮೀ ನಾರಾಯಣ ಶೆಟ್ಟಿ .ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ ಸುರೇಂದ್ರ ಕುಮಾರ್ ಹೆಗಡೆ. ಗೀತಾ ಅಂಬಿಕ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷತೆ ಕೆ ಎಲ್ ಬಂಗೇರ. ನಾಟಕ ಯಕ್ಷಗಾನ ಸಂಚಾಲಕರಾಗಿರುವ ಕಲಾ ಪ್ರಕಾಶ ಪ್ರತಿಷ್ಠಾನದ ಪ್ರವರ್ತಕ ಪ್ರಕಾಶ್ ಶೆಟ್ಟಿ ಸುರತ್ಕಲ್. ಕರ್ನೂರು ಮೋಹನ್ ರೈ. ಕುಕ್ಕುಂದೂರು ಕರುಣಾಕರ ಶೆಟ್ಟಿ. ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ. ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ .ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ. ಕರ್ನಾಟಕ ಸಂಘ ಮುಂಬಯಿ ಡಾ ಭರತ್ ಕುಮಾರ್ ಪೊಲಿಪು. ಓಂದಾಸ್ ಕಣ್ಣಂಗಾರ್ .ಕಲಾ ಪೋಷಕ ರವೀಂದ್ರನಾಥ್ ಭಂಡಾರಿ. ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಗೊರೆಗಾವ್ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ ಮೆಂಡನ್. ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್. ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ. ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಅಧ್ಯಕ್ಷ ಸದಾನಂದ ಆಚಾರ್ಯ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್. ಗೋಪಾಲ್ ಪುತ್ರನ್ ಶ್ರೀದೇವಿ ಯಕ್ಷಕಲಾ ನಿಲಯ ನಾಲಸೋಪರ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಅಜೆಕಾರು ಬಾಲಕೃಷ್ಣ ಶೆಟ್ಟಿ. ಕಟೀಲು ಸದಾನಂದ ಶೆಟ್ಟಿ..ಕಲಾಸಂಗಮ ಮಂಗಳೂರು ತಂಡದ ವಿಜಯಕುಮಾರ್ ಕೊಡಿಯಾಲ್ ಬೈಲ್. ದೇವದಾಸ್ ಕಾಪಿಕಾಡ್ ಲಯನ್ ಕಿಶೋರ್ ಡಿ ಶೆಟ್ಟಿ ವಿಜಯ ಕಲವಿದರು ಕಿನ್ನಿಗೊಳಿ ತಂಡದ ಶರತ್ ಶೆಟ್ಟಿ .ಜಗದೀಶ್ ಶೆಟ್ಟಿ ಕೆಂಚನಕೆರೆ ಮತ್ತಿತರ ಗಣ್ಯರು ದುಃಖ ಸಂತಾಪ ಸೂಚಿಸಿರುವರು

- Advertisement -
spot_img

Latest News

error: Content is protected !!