ಅಹಮದಾಬಾದ್: ಲಾಕ್‍ಡೌನ್ ನಡುವೆ ಕಾರ್ ನಲ್ಲಿ ಭೇಟಿಯಾದ ಜೋಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ ನ ವಸ್ತ್ರಾಪುರದಲ್ಲಿ ನಡೆದಿದೆ. ಈ ಜೋಡಿ ಲಾಕ್‍ಡೌನ್ ಆದಾಗಿನಿಂದ ಭೇಟಿಯಾಗಿರಲಿಲ್ಲ. ಹಾಗಾಗಿ ಮನೆಯಿಂದ ಹೊರ ಬಂದು ರಸ್ತೆಯಲ್ಲಿಯೇ ಕಾರ್ ನಿಲ್ಲಿಸಿ ಕುಶಲೋಪಚರಿ ವಿಚಾರಿಸುತ್ತ ಏಕಾಂತದಲ್ಲಿ ಮೈ ಮರೆತಿದ್ದರು.
ಈ ವೇಳೆ ಪೊಲೀಸರು ಅನುಮಾನಗೊಂಡು ಕಾರ್ ಪರಿಶೀಲನೆ ನಡೆಸಿದಾಗ ಜೋಡಿ ಸಿಕ್ಕಿಬಿದ್ದಿದಾರೆ. ಪೊಲೀಸರನ್ನು ಕಂಡ ಕೂಡಲೇ ಗಾಬರಿಗೊಳಗಾದ ಜೋಡಿ, ರಸ್ತೆ ಬದಿಯ ನಾಯಿಗಳಿಗೆ ಹಾಲು ಹಾಕಲು ಬಂದಿರೋದಾಗಿ ಸುಳ್ಳು ಹೇಳಿದೆ.
ಬೆಳಕಿಗೆ ಬಂತು ಅನೈತಿಕ ಸಂಬಂಧ
ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಬಿಚ್ಚಿಟ್ಟಿದ್ದಾರೆ. 30 ವರ್ಷದ ವಿವಾಹಿತ ವ್ಯಕ್ತಿಯ ಜೊತೆ 40 ವರ್ಷದ ವಿಚ್ಛೇದಿತ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಲಾಕ್‍ಡೌನ್ ಬಳಿಕ ಮನೆಯಲ್ಲಿ ಬಂಧಿಯಾಗಿದ್ದರಿಂದ ಜೋಡಿ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾಗಲು ನಿರ್ಧರಿಸಿ, ರಸ್ತೆ ಬದಿಯಲ್ಲಿಯೇ ಕಾರ್ ನಿಲ್ಲಿಸಿ ಏಕಾಂತದಲ್ಲಿದ್ದರು. ಏಕಾಂತದಲ್ಲಿದ್ದಾಗಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಬ್ಬರು ಲಾಕ್‍ಡೌನ್ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.