- Advertisement -
- Advertisement -
ಬಂಟ್ವಾಳ: ಹಜಾಜ್ ಬೀಡಿ ಮಾಲಕ ದಿ. ಜಿ.ಅಬ್ದುಲ್ ಖಾದರ್ ಹಾಜಿ ಅವರ ಹಿರಿಯ ಪುತ್ರ ಯೂಸುಫ್ ಹಾಜಿ 63 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಕಲ್ಲಡ್ಕ ಸಮೀಪದ ಗೋಳ್ತಮಜಲುವಿನ ಸ್ವಗೃಹದಲ್ಲಿ ಇಂದು ನಿಧನರಾದರು.
ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿಯ ಮಂಡಳಿಯ ಸದಸ್ಯರೂ, ಗೋಳ್ತಮಜಲು ಜುಮಾ ಮಸೀದಿ ಸಮಿತಿಯ ಉಪಾಧ್ಯಕ್ಷರೂ, ಗೋಳ್ತಮಜಲು ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದ ಅವರು, ಹಲವಾರು ಧಾರ್ಮಿಕ ಸಂಘಟನೆಗಳಲ್ಲಿ, ಸಾಮಾಜಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
- Advertisement -