- Advertisement -
- Advertisement -
ಬೆಳ್ತಂಗಡಿ: ಕೊರೊನಾ ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಆಹಾರ ನೀಡಿದರು.
ಚಾರ್ಮಾಡಿ ಘಾಟಿಯಲ್ಲಿ ಆಹಾರವಿಲ್ಲದೇ ಕಂಗೆಟ್ಟಿದ್ದ ಮಂಗಗಳಿಗೆ ಆಹಾರ ಒದಗಿಸಿ ಪ್ರಾಣಿಪ್ರೀತಿ ಮೆರೆದಿದ್ದಾರೆ. ದೇಶದಾದ್ಯಂತ ಕೊರೊನಾ ಹಿನ್ನಲೆ ಲಾಕ್ ಡೌನ್ ಘೋಷಣೆಯಾದ ನಂತರ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳ ಜೀವನ ಕೂಡ ಅಸ್ತವ್ಯಸ್ತವಾಗಿದೆ.
ಉಪಯುಕ್ತ ಆಹಾರವಿಲ್ಲದೆ ಮೂಕ ಪ್ರಾಣಿಗಳು ಚಾರ್ಮಾಡಿ ಘಾಟಿಯಲ್ಲಿ ಜನ ಸಂಚಾರ ಇಲ್ಲದೆ ಪ್ರಯಾಣಿಕರು ಹಾಗೂ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕಾಡು ಪ್ರಾಣಿಗಳು ಹೊಟ್ಟೆಗಿಲ್ಲದೆ ಕಣ್ಣೀರಿಡುತ್ತಿರುವ ವಿಚಾರ ತಿಳಿದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ಚಾರ್ಮಾಡಿ ಘಾಟಿಯಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿದ್ದ ಮಂಗಗಳಿಗೆ ವಿಧವಿಧವಾದ ಹಣ್ಣುಹಂಪಲುಗಳನ್ನು ನೀಡಿ ಕೃತಜ್ಞರಾಗಿದ್ದಾರೆ.
- Advertisement -