ನೊಯ್ಡಾ : ಟಿಕ್ ಟಾಕ್ ನಿಂದಾಗಿ ಹಲವರು ಬೇರೆ ಬೇರೆ ಕಾರಣಕ್ಕೆ ಇದುವರೆಗೆ ಸಾವನ್ನಪ್ಪಿದ್ದಾರೆ. ಆದರೆ ಇಲ್ಲೊಬ್ಬ ಯುವಕ ತಾನು ಮಾಡುತ್ತಿರುವ ಟಿಕ್ಟಾಕ್ ವಿಡಿಯೋಗಳಿಗೆ ಯಾರೂ ಲೈಕ್ ಮಾಡುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೌದು, ನೊಯ್ಡಾದ 39ನೇ ಸೆಕ್ಟಾರ್ನ ಸಲಾರ್ಪುರದಲ್ಲಿ ವಾಸಿಸುತ್ತಿದ್ದ 18 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈತ ಟಿಕ್ಟಾಕ್ ಆಯಪ್ನಲ್ಲಿ ಸಕ್ರಿಯನಾಗಿ ವಿಡಿಯೋ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಅತ್ಮಹತ್ಯೆ ಮಾಡಿರುವ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಫ್ಯಾನ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಯುವಕನ ದೇಹ ಕಂಡುಬಂದಿದೆ.
ಪೊಲೀಸರು ಸ್ಥಳೀಯರನ್ನು ಈ ಬಗ್ಗೆ ವಿಚಾರಿಸಿದಾಗ, ‘ಟಿಕ್ಟಾಕ್ ವಿಡಿಯೋಗಳಿಗೆ ಲೈಕ್ ಬಾರದಿದ್ದಕ್ಕೆ ಯುವಕ ಕೆಲ ದಿನಗಳಿಂದ ಬೇಸರಕ್ಕೆ ಒಳಗಾಗಿದ್ದ’ ಎಂದಿದ್ದಾರೆ ಸದ್ಯ ಪೊಲಿಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
